May 19, 2024

Bhavana Tv

Its Your Channel

ವೃತೋತ್ಸವ, ಅಷ್ಟಾವಧಾನ ಹಾಗೂ ಯಕ್ಷಗಾನ ಜಾಂಬವತಿ ಕಲ್ಯಾಣ ತಾಳಮದ್ದಳೆ ಮತ್ತು ಪುತ್ರಕಾಮೇಷ್ಟಿ ಕಾರ್ಯಕ್ರಮ

ವರದಿ :- ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಭಾರತೀಯ ಪರಂಪರೆಯಲ್ಲಿ ಹಬ್ಬ-ಹರಿದಿನಗಳ ಆಚರಣೆಗೆ ಅತ್ಯಂತ ಮಹತ್ವ ನೀಡಲಾಗಿದ್ದು, ವೃತಾಚರಣೆಯೆಂದರೆ ಇನ್ನೂ ಮಹತ್ವದ್ದಾಗಿದೆ. ಪ್ರತಿ ಹಬ್ಬಗಳು ಪೂಜೆ ವಿಧಿ-ವಿಧಾನ, ತಿಂಡಿ-ತಿನಿಸು ಸೇರಿದಂತೆ ವಿಭಿನ್ನ ಪರಂಪರೆಯಿAದ ನಡೆದುಬಂದಿದೆ. ಇಂತಹ ಶ್ರೇಷ್ಠ ವೃತಾಚರಣೆ ಅನಂತನ ವೃತ ಎಂದು ರಾಜ್ಯ ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಕೂಲಿಬೇಣದ ವೇ.ಮೂ.ಗಣಪತಿ ಭಟ್ಟರ ಮನೆಯ ಹತ್ತಿರ ನಡೆದ ವೃತೋತ್ಸವ, ಅಷ್ಟಾವಧಾನ ಹಾಗೂ ಯಕ್ಷಗಾನ ಜಾಂಬವತಿ ಕಲ್ಯಾಣ ತಾಳಮದ್ದಳೆ ಮತ್ತು ಪುತ್ರಕಾಮೇಷ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅನಂತನ ವೃತದ ಮಹತ್ವ ಏನಿದೆ ಎಂಬುದನ್ನು ವೃತದ ಕಥೆಯಿಂದ ತಿಳಿಯಬಹುದಾಗಿದೆ. ಎಂತಹ ಕಷ್ಟದಲ್ಲಿದ್ದವನು ಶ್ರದ್ಧಾಭಕ್ತಿಯಿಂದ ವೃತಾಚರಣೆ ಮಾಡಿದರೆ ಸಂಪತ್ತು ಲಭಿಸುತ್ತದೆ. ಇದು ಮಹಿಳೆಯರಿಗೆ ಪ್ರಧಾನವಾದುದು ಎಂದ ಅವರು, ಜಗತ್ತಿನಲ್ಲಿ ನಿಮಿಷವೊಂದಕ್ಕೆ ಭಾಷೆಯೊಂದು ಸಾಯುತ್ತಿದೆ. ಭವಿಷ್ಯತ್‌ನಲ್ಲಿ ಹಿಂದೂ ಧರ್ಮಕ್ಕೂ ಅಷ್ಟೇ ಆತಂಕವಿದೆ. ಆದ್ದರಿಂದ ಹಿಂದೂ ಧರ್ಮದ ಸಂಸ್ಕೃತಿ-ಪರoಪರೆ ಉಳಿಸಿಕೊಳ್ಳಬೇಕಾದರೆ ಪ್ರತಿ ಮನೆಗಳಲ್ಲೂ ಇಂತಹ ಕಾರ್ಯಕ್ರಮ ನಡೆಸುವಂತಾಗಬೇಕು ಎಂದರು. ಜಗತ್ತಿನಲ್ಲಿ ಐಟಿಬಿಟಿ ಕೂಡ ಮಾನವನ ಬುದ್ಧಿಶಕ್ತಿಗಿಂತಲೂ ಮಿಗಿಲಾಗಲು ಸಾಧ್ಯವಿಲ್ಲ. ಈ ಅಷ್ಠಾವಧಾನ ಕಲೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠತೆ ಹೊಂದಿದೆ. ಕಂಪ್ಯೂಟರ್‌ಗಿAತಲೂ ಅಧಿಕ ಜ್ಞಾನವನ್ನು ಅಷ್ಠಾವಧಾನಿಗಳು ಹೊಂದಿರಬೇಕಾಗುತ್ತದೆ. ಅಂತಹ ಶಕ್ತಿ-ಸಾಮಥ್ರ‍್ಯವನ್ನು ಔದಾನ್ಯದ ಮೂಲಕ ಕಾಣಬಹುದಾಗಿದೆ. ಈ ದೃಷ್ಟಿಯಲ್ಲಿ ಇಲ್ಲಿ ನಡೆದ ಈ ಸಭೆ ಅತ್ಯಂತ ಮಹತ್ವಪೂರ್ಣವಾದದ್ದು ಎಂದರು.
ವೇ.ಮೂ|| ಗೋಪಾಲ ಭಟ್ಟ ಕೊಂಕಣಕೊಪ್ಪ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿದ್ದ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ, ಸ್ವರ್ಣವಲ್ಲೀ ರಾ.ರಾ.ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಂಕರ ಭಟ್ಟ ಬಾಲೀಗದ್ದೆ, ವಿ||ವಿಘ್ನೇಶ್ವರ ಭಟ್ಟ ಬಿಸಗೋಡ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಗಣಪತಿ ಹೆಗಡೆ ಜೂಜಿನಬೈಲ್, ಎಂ.ಎನ್.ಭಟ್ಟ ಕವಾಳೆ ಶುಭ ಹಾರೈಸಿದರು.
ಸೀತಾ ದಾನಗೇರಿ ಮತ್ತು ಮಹಾಲಕ್ಷ್ಮಿ ಭಟ್ಟ ಪ್ರಾರ್ಥಿಸಿದರು. ಸ್ಮಿತಾ ಭಟ್ಟ ಸ್ವಾಗತ ಗೀತೆ ಹಾಡಿದರು. ಕೃಷ್ಣ ಹೆಗಡೆ ಜೂಜಿನಬೈಲ್ ಸ್ವಾಗತಿಸಿ, ವಂದಿಸಿದರು. ಗೀತಾ ಭಟ್ಟ ನಿರ್ವಹಿಸಿದರು.

error: