May 19, 2024

Bhavana Tv

Its Your Channel

ಯಲ್ಲಾಪುರ ಪಟ್ಟಣ ಪಂಚಾಯತ ವಿಶೇಷ ಸಾಮಾನ್ಯ ಸಭೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಪಟ್ಟಣ ಪಂಚಾಯತದ ವಿಶೇಷ ಸಾಮಾನ್ಯ ಸಭೆ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆಯಿತು. ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ೨೦೧೭-೧೮, ೨೦೧೮-೧೯, ೨೦೧೯-೨೦ನೇ ಸಾಲಿನಲ್ಲಿ ಬಾಕಿ ಉಳಿದ ಮೊತ್ತ ಹಾಗೂ ೨೦೧೬-೧೭ನೇ ಸಾಲ್ಯಾನ್ ಹದಿನಾಲ್ಕನೇ ಹಣಕಾಸು ಮತ್ತು ೨೦೧೯-೨೦ನೇ ಸಾಲಿನ ಹಣಕಾಸು ಯೋಜನೆ ಮತ್ತು ಎಸ್.ಎಫ್.ಸಿ ೨೦೨೧-೨೨ ನೇ ಸಾಲಿನಲ್ಲಿ ಕರೆದು ಟೆಂಡರ್ ಗಳಿಗೆ ಯಾವುದೇ ಚರ್ಚೆ ಇಲ್ಲದೇ ಅನುಮೋದನೆ ನೀಡಲಾಯಿತು. ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಾರ್ಷಿಕ ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರ ಅನುಗ್ರಹ ಇಲೇಕ್ಟ್ರೀಕಲ್ಸ ಶಿರಸಿ ಇವರಿಗೆ ೨೦೨೧-೨೨ನೇ ಸಾಲಿಗೆ ಮುಂದಿನ ಒಂದು ವರ್ಷದ ಅವದಿಗೆ ಮುಂದುವರಿಸಲಾಯಿತು. ನಲವತ್ತು ಲಕ್ಷ ರೂಪಾಯ ಎಮ್.ಎಚ್.ನಾಯ್ಕ ರಸ್ತೆಮಾಡಿ ಕೆಲವೇ ತಿಂಗಳುಗಳಲ್ಲಿ ಹಾಳಾದ ಬಗ್ಗೆ ಕೈಸರ್ ಅಲಿ ತರಾಟೆಗೆ ತೆಗೆದುಕೊಂಡು ಮೂರು ಸಲ ಇನೆಸ್ಪೆಕ್ಷನ ಮಾಡಿದ ರಸ್ತೆ ತಡೆ ಹಾಳಾಗಿದೆ. ಕಳಪೆ ಕಾಮಗಾರಿಗೆ ತನ್ನ ವಿರೋಧವಿದೆ ಎಂದು ಮಂಜುನಾಥ ನಗರದ ಸದಸ್ಯರಾದ ಸತೀಶ ನಾಯ್ಕ ಹೇಳಿದರು. ಸದಸ್ಯರಾದ ರಾಧಾಕೃಷ್ಣ ಮಾತನಾಡಿ ಸುಮ್ಮನೆ ನಡಾವಳಿಯಲ್ಲಿ ಬರೆದರೇ ಸಾಲದು ಠರಾವು ಜಾರಿಯಾಗಿ ಕೆಲಸ ಆಗಬೇಕು. ನಗರದಲ್ಲಿ ಬೀದಿ ನಾಯಿ, ಹಂದಿ, ಬಿಡಾಡಿ ದನಗಳ ಹಾವಳಿ ಜೋರಾಗಿದ್ದು ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುವಂತಾಗಿದೆ. ಟೆಂಡರ ಮೊತ್ತ ಕಡಿಮೆ ಇದ್ದು ಡಿಪೋಜಿಟ ಇಟ್ಟುಕೊಂಡರೆ ಸಾಲದು,ಕೆಲಸ ಕಳಪೆ ಆದರೆ ಅದಕ್ಕೆ ಪೆನಾಲ್ಟಿ ಹಾಕಬೇಕೆಂದರು. ನೂತನವಾಗಿ ಪಂಚಾಯತಗೆ ಆಗಮಿಸಿದ ಸುರೇಶ ಶಿರಾಲಿಯವರನ್ನು ಸಭೆಗೆ ಪರಿಚಯಿಸಿದರು. ಸಭೆಯ ಅಧ್ಯಕ್ಷತೆಯನ್ನು ಸುನಂದಾ ದಾಸ ವಹಿಸಿದ್ದರು.ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಮಿತ ಅಂಗಡಿ, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ, ಸದಸ್ಯರುಗಳು ಹಾಜರಿದ್ದರು. ಹೇಮಾವತಿ ಭಟ್ಟ ಎಲ್ಲರನ್ನೂ ಸ್ವಾಗತಿಸಿದರು.

error: