May 19, 2024

Bhavana Tv

Its Your Channel

ಯಲ್ಲಾಪುರ ತಾಲೂಕಿನ ಅನಧಿಕೃತ ದೇವಸ್ಥಾನವನ್ನು ಸಕ್ರಮಗೊಳಿಸಿ- ರಾಮು ನಾಯ್ಕ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ: ಸರ್ವೋಚ್ಚ ನ್ಯಾಯಾಲಯ ೧೩ ವರ್ಷಗಳ ಹಿಂದೆ ನೀಡಿದ ತೀರ್ಪನ್ನೇ ಆಧಾರವಾಗಿಟ್ಟುಕೊಂಡು, ಅನಧಿಕೃತ, ಅತಿಕೃಮಿತ ಇತ್ಯಾದಿ ಕಾರಣಗಳನ್ನು ಮುಂದಿಟ್ಟುಕೊAಡು, ನಮ್ಮ ಆಡಳಿತಶಾಹಿ ಅಧಿಕಾರಿಗಳು ಹಿಂದು ದೇವಸ್ಥಾನಗಳನ್ನು ನೆಲಸಮ ಮಾಡಲು ಹೊರಟಿದ್ದಾರೆ. ಈಗಾಗಲೇ ಮೈಸೂರಿನಲ್ಲಿರುವ ೭೦೦ ವರ್ಷಗಳಷ್ಟು ಪುರಾತನ ದೇವಾಲಯ ಇವರ ಆಡಳಿತ ದರ್ಪಕ್ಕೆ ಬಲಿಯಾಗಿದೆ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ೪೫೯ ಧಾರ್ಮಿಕ ಕೇಂದ್ರಗಳನ್ನು ಈ ರೀತಿ ಅನಧಿಕೃತ ಎಂದು ನಮ್ಮ ಜಿಲ್ಲಾಡಳಿತ ಲೆಕ್ಕ ಹಾಕಿರುವುದಾಗಿ ತಿಳಿದಿದೆ. ಇದರಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳು ಕೇವಲ ಯಲ್ಲಾಪುರ ತಾಲೂಕಿನಲ್ಲಿಯೇ ಇರುತ್ತವೆ. ಸರಕಾರ ಯಾವುದೇ ದೇವಸ್ಥಾನಗಳು, ಅವರ ದೃಷ್ಟಿಯಲ್ಲಿ ಅನಧಿಕೃತ ಎಂದಾದಲ್ಲಿ ಅವನ್ನು ಕೂಡಲೇ ಅಧಿಕೃತ ಮಾಡಬೇಕು. ದೇವಸ್ಥಾನಗಳ ಹುಂಡಿ ಹಣ ಬಳಸುವ ಸರಕಾರ, ಇಂತಹ ಅನಧಿಕೃತ ದೇವಸ್ಥಾನಗಳ ಅಡಿ ಭೂಮಿ ಸರಕಾರದಾಗಿದ್ದಲ್ಲಿ ಕೂಡಲೇ ಅದನ್ನು ಮಂಜೂರಿ ಮಾಡಿ ಸಕ್ರಮ ಮಾಡಬೇಕು. ಹಾಗೂ ಮೈಸೂರಿನಲ್ಲಿ ದೇವಸ್ಥಾನ ಕೆಡವಿದವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಲಾಯಿತು.
ಹಿಂದು ಸಮಾಜದ ಪ್ರಮುಖರಾದ ರಾಮು ನಾಯ್ಕ ಈ ಕುರಿತು ಮಾತನಾಡಿ, ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮಾನ್ಯ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋರಕ್ಷಾ ಜಿಲ್ಲಾ ಸಂಚಾಲಕ ಬಾಬು ಬಾಂದೇಕರ, ವಿ.ಹಿಂ.ಪ. ತಾಲೂಕಾ ಅಧ್ಯಕ್ಷ ನಾರಾಯಣ ನಾಯಕ, ಸಂತೋಷ ನಾಯ್ಕ, ವಿಶಾಲ ವಾಳಂಬಿ, ವಿಶ್ವನಾಥ ಪಾಟಣಕರ, ವಿನೋದ ತಳೇಕರ, ಮಂಜುನಾಥ ಹೆಗಡೆ, ಜಗನ್ನಾಥ ರೇವಣಕರ, ನಾಗೇಶ ಯಲ್ಲಾಪುರಕರ, ಕೆ.ಜಿ.ನಾಯಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: