May 19, 2024

Bhavana Tv

Its Your Channel

ತಾಲೂಕು ಮಟ್ಟದ ಚುಕ್ಕಿ ರಂಗೋಲಿ ಸ್ಪರ್ಧೆ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ:- “ರಂಗೋಲಿ” ಒಂದು ಸನಾತನ ಧಾರ್ಮಿಕ ಆಚರಣೆಯ ಭಾಗ ಹಿಂದುಗಳ ಸನಾತನ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿ ಪದ್ದತಿ ಪರಂಪರೆಯ ಒಂದು ಭಾಗ. ಬೆಳೆಯುತ್ತಿರುವ ಜಗತ್ತಿನ ಆಧುನಿಕ ಪದ್ದತಿಯಲ್ಲಿ ರಂಗೋಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಇದರ ಗಂಭೀರತೆ ಅರಿತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಶ್ರೇಷ್ಟತೆ ಹೊಂದಿರುವ ರಂಗೋಲಿ ಪರಂಪರೆಯನ್ನು ಉಳಿಸುವ ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕು ಮಟ್ಟದ ಚುಕ್ಕಿ ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ಸನಾತನ ಪದ್ದತಿ ಪರಂಪರೆಯ ಅರಿವು ಮೂಡಿಸುತ್ತಿದೆ.ಬಹುಶಃ ಧಾರ್ಮಿಕ ಆಚರಣೆಯಲ್ಲಿ ರಂಗೋಲಿಗೆ ಪವಿತ್ರ ಸ್ಥಾನ ನೀಡಿ ಧಾರ್ಮಿಕ ಆಚರಣೆಯಲ್ಲಿ ಬಳಸುವ ಜಗತ್ತಿನ ಏಕೈಕ ರಾಷ್ಟ್ರ ಭಾರತವೇ ಆಗಿದೆ. ಆದರೆ ಆಧುನಿಕತೆಯ ಸೋಗಿನಲ್ಲಿ ರಂಗೋಲಿ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅದರಲ್ಲು ಯುವ ಪೀಳಿಗೆಗೆ ನಮ್ಮ ಸನಾತನ ಆಚರಣೆಗಳ ಮಹತ್ವ ತಿಳಿಸಿ ಹೇಳದಿರುವುದು ಸಹ ಒಂದು ಕಾರಣವಾಗಿರಬಹುದು.
ಕಲ್ಲಿನ ಹುಡಿ, ಜೇಡಿ ಮಣ್ಣಿನ ಪುಡಿ, ಅಕ್ಕಿ ಹಿಟ್ಟು ಹೀಗೆ ವಿವಿಧ ಪದಾರ್ಥಗಳನ್ನು ಬಳಸಿ ರಂಗೋಲಿ ಬಿಡಿಸುತ್ತಿದ್ದದ್ದು ನಮ್ಮ ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ರಂಗೋಲಿ ಬಿಡಿಸಲು ಸಮಯವಿಲ್ಲದೆ ಮತ್ತು ಬಿಡಿಸುವ ಕಲೆ ಕಲಿಯದೆ ಪ್ಲಾಸ್ಟಿಕ್ ಹಾಳೆಯಮೇಲೆ ಮುದ್ರಿತವಾದ ರಂಗೋಲಿ ಬಹಳಷ್ಟು ಮನೆಗಳ ದ್ವಾರ ಬಾಗಿಲ ಹೊಸಿಲಿನಲ್ಲಿ ದೇವರಕೋಣೆಯ ಬಾಗಿಲಿನಲ್ಲಿ ನೆಲಕ್ಕೆ ಅಂಟಿಸಿರುವುದು ಕಂಡು ಬರುತ್ತದೆ. ಇದರಿಂದ ಬೆಳೆಯುವ ಮಕ್ಕಳಿಗೆ ರಂಗೋಲಿ ಹೇಗೆ ಬಿಡಿಸಬೇಕು ಅದರ ಮಹತ್ವವೇನು ಎಂಬುದೆ ತಿಳಿದಿಲ್ಲವಾಗಿದೆ ಇದು ಪದ್ದತಿ ಪರಂಪರೆಗಳು ನಮ್ಮಿಂದ ದೂರಾಗುವ ಲಕ್ಷಣಗಳಾಗಿವೆ.
ರಂಗೋಲಿ ಶ್ರದ್ದೆ ಭಕ್ತಿಯ ಪ್ರತೀಕವಾಗಿದೆ ದೈವಸ್ವರೂಪದ ಸ್ಥಾನ ಪಡೆದಿದೆ ಯಾವುದೆ ಮನೆಯ ಹೊಸಿಲಿನಲ್ಲಿ ರಂಗೋಲಿ ಇದ್ದರೆ ಆ ಮನೆ ಕಳಕಳೆಯಾಗಿರುತ್ತದೆ ಇಲ್ಲವಾದಲ್ಲಿ ಸೂತಕದ ಛಾಯೆ ಆವರಿಸಿದಂತಾಗುತ್ತದೆ. ಜಗತ್ತು ಎಷ್ಟೇ ಮುಂದುವರೆದರು ನಮ್ಮ ಸಂಪ್ರದಾಯ ಸದಾ ನಿತ್ಯನೂತನ. ರಂಗೋಲಿಯಲ್ಲಿ ಬಹುಮುಖ್ಯವಾಗಿ ಎರಡು ವಿಭಾಗಗಳಿವೆ ಎಳೆ ರಂಗೋಲಿ ಮತ್ತು ಚುಕ್ಕಿ ರಂಗೋಲಿ ಇತ್ತೀಚೆಗೆ ಫ್ರೀಹ್ಯಾಂಡ್ ರಂಗೋಲಿಯು ಸಹ ಪ್ರಚಲಿತದಲ್ಲಿದೆ. ಅದರಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ಚುಕ್ಕಿ ರಂಗೋಲಿಯ ಸ್ಪರ್ಧೆ ಆಯೋಜಿಸಿದ್ದು ತಾಲೂಕಿನಾದ್ಯಂತ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧೆಗಾಗಿ ವಾಟ್ಸಪ್ ಮೂಲಕ ರಂಗೋಲಿ ಬಿಡಿಸಿ ಕಳುಹಿಸಿದ್ದರು. ಅದರಲ್ಲಿ ೨೫ ಜನರನ್ನು ಕೆ.ಜೆ.ಯು ಆಯ್ಕೆ ಸಮಿತಿ ಪರಿಗಣಿಸಿದ್ದು ಸ್ಪರ್ಧಿಗಳು ದಿನಾಂಕ ೨೫-೯-೨೦೨೧ ರ ಶನಿವಾರ ಪಟ್ಟಣದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಲೈವ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆಂದು ಸಂಘದ ಕಾರ್ಯದರ್ಶಿ ಕೆಂಡಾಲ್ ನಾಗೇಶ ತಿಳಿಸಿದ್ದಾರೆ.. ಇದು ಸಮಾಜದ ಹಿರಿಯರ ಪ್ರಾಜ್ಞರ ಧರ್ಮದ ಮುಖಂಡರ ಪ್ರಶಂಸೆಗೆ ಪಾತ್ರವಾಗಿದೆ.
ಇಂತಹ ಸಾರ್ಥಕ ಕಾಯಕಗಳಲ್ಲಿ ಸಾರ್ವಜನಿಕರ ಸಹಕಾರ ಪ್ರೋತ್ಸಾಹ ಸದಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ ನೊಂದಿಗೆ ಇರಲಿ ಎಂಬುದು ಸಂಘಟಕರ ಅಭಿಮತವಾಗಿದೆ. ರಂಗೋಲಿ” ಹಿಂದು ಧಾರ್ಮಿಕ ಆಚರಣೆಯ ಶ್ರೇಷ್ಟತೆ ಉಳಿಸೋಣ ಮುಂದಿನಪೀಳಿಗೆಗೆ ವರ್ಗಾಹಿಸೋಣ.

error: