May 19, 2024

Bhavana Tv

Its Your Channel

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಯಲ್ಲಾಪುರದ ವಿಶಾಲ ನಾಯಕ ಆಯ್ಕೆ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ: ೨೦೨೦-೨೧ ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಬ್ಯಾಡ್ಮಿಂಟನ್ ಸ್ಪರ್ಧೆ ಪಂದ್ಯಾವಲಿಗೆ ಕರ್ನಾಟಕ ರಾಜ್ಯ ತಂಡದಿoದ ಯಲ್ಲಾಪುರದ ಶಿಕ್ಷಕ ವಿಶಾಲ ವೆಂಕಟ್ರಮಣ ನಾಯಕ ಆಯ್ಕೆಯಾಗಿರುತ್ತಾರೆ.
ಇವರು ದಿನಾಂಕ :೨೪/೦೯/೨೦೨೧ ರಿಂದ ೩೦/೦೯/೨೦೨೧ ರವರೆಗೆ ದೆಹಲಿಯಲ್ಲಿರುವ ತ್ಯಾಗರಾಜ ಐಎನ್‌ಎ ಸ್ಟೇಡಿಯಂನಲ್ಲಿ ನಡೆಯಲಿದೆ.ವಿಶಾಲ ನಾಯಕ ಯಲ್ಲಾಪುರ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು. ಬಿಎ, ಬಿಎಡ್ ಪದವಿ ಪಡೆದ ಆದರ್ಶ ಶಿಕ್ಷಕರಾಗಿದ್ದಾರೆ. ನಂತರ ಸ.ಕಿ.ಪ್ರಾ ಶಾಲೆ ಹೆಗ್ಗುಂಬಳಿ, ನಂದೊಳ್ಳಿ ಪಂಚಾಯತ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನಿಷ್ಠಾವಂತ ಶಕ್ತಿಯಾಗಿ ವಿದ್ಯಾರ್ಥಿಗಳ ಹೃದಯದಲ್ಲಿ ಅಕ್ಷ ದೀಪವನ್ನು ಹತ್ತಿಸಿ ಸಕ್ರೀಯರಾಗಿ ತಮ್ಮ ಕರ್ತವ್ಯದ ಕೆಲವೇ ವರ್ಷಗಳಲ್ಲಿ ಶಾಲೆಯ ಸುಂದರತೆ ಹಾಗೂ ಸಾಂಸ್ಕೃತಿಕ ಮೆರಗನ್ನು ಸಮುದಾಯದ ಸಹಭಾಗಿತ್ವದಿಂದ ಮಾದರಿ ಶಾಲೆಯನ್ನಾಗಿಸಿದ್ದಾರೆ.ಇವರು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಣವನ್ನು ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದದ್ದು ಶಾಲಾ ಹಂತದಲ್ಲಿ ಉತ್ತಮ ಕ್ರೀಡಾಪಟುವಾಗಿ ತಾಲೂಕು ಜಿಲ್ಲೆ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಬಹುಮುಖ ಪ್ರತಿಭೆಯ ಪ್ರತಿಭಾವಂತ ಶಿಕ್ಷಕರಾಗಿದ್ದಾರೆ.ಇವರು ನಾಯಕನಕೆರೆಯ ಗಣಪತಿ ನಾಯಕ ಹಾಗೂ ಲಕ್ಷ್ಮೀ ನಾಯಕರವರ ಮೊಮ್ಮಗನಾಗಿದ್ದು ಇವರ ಮಕ್ಕಳೆಲ್ಲರೂ ಆದರ್ಶ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಆದರ್ಶ ಮನೆತನವಾಗಿದೆ.
ಯತೀಶ ಕುಮಾರ (ಅರಣ್ಯ ಸಂರಕ್ಷಣಾಧಿಕಾರಿಗಳು) ರವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದು ತಾಲೂಕಿನಿಂದ ಪ್ರಪ್ರಥಮ ಬಾರಿಗೆ ಬ್ಯಾಡ್ಮಿಂಟನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿಶಾಲ ನಾಯಕರವರು ಪ್ರಥಮರಾಗಿದ್ದಾರೆ. ಇವರಿಗೆ ಯತೀಶ ಕುಮಾರ (ಅರಣ್ಯ ಸಂರಕ್ಷಣಾಧಿಕಾರಿಗಳು) ಶಿರಸಿ ಹಾಗೂ ಡಿಡಿಪಿಐ ದಿವಾಕರ ಶೆಟ್ಟಿ, ಯಲ್ಲಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಬಿಆರ್ ಸಿ ಶ್ರೀರಾಮ ಹೆಗಡೆ, ಹಾಗೂ ತಾಲೂಕಾ ಕಾರ್ಯ ನಿರ್ವಹಣಾ ಅಧಿಕಾರಿ ಜಗದಿಶ ಕಮ್ಮಾರರವರು ಶುಭ ಹಾರೈಸಿದ್ದಾರೆ.

error: