
ವರದಿ:ವೇಣುಗೋಪಾಲ ಮದ್ಗುಣಿ
ಯಲ್ಲಾಪುರ:- ಮೂವತ್ತೈದನೆಯ ವರ್ಷದ ಸಂಕಲ್ಪ ಉತ್ಸವ ೮ ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಸಾಂಸ್ಕೃತಿಕ ಸಂಗಮದ ವೈಭವ, ಕನ್ನಡ ನಾಡುನುಡಿಯ ಸೇವೆ ನವೆಂಬರ್ ೬ ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು ೩೫ ನೆಯ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಉತ್ಸವದ ಮಾಹಿತಿ ನೀಡುತ್ತಿದ್ದರು.
ಈ ಉತ್ಸವದಲ್ಲಿ ನಾಡಿನ ಮಠಾಧೀಶರ ಸಾನ್ನಿಧ್ಯ, ಸಭಾಪತಿಗಳು, ಸಭಾಧ್ಯಕ್ಷರು, ಸಚಿವರು, ಶಾಸಕರು, ಸಂಸದರು, ಸಾಹಿತಿಗಳು, ಕಲಾವಿದರು ಸೇರಿದಂತೆ ನಾಡಿನ ಹಿರಿಯ ಸಾಧಕರು ಪಾಲ್ಗೊಂಡು ಒಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ
ಪ್ರಕೃತಿಯ ನೆಲದಲ್ಲಿ ಸಂಸ್ಕೃತಿಯ ಪ್ರತಿಬಿಂಬವನ್ನು ಮೇಳೈಸುವ ಕಾರ್ಯದಲ್ಲಿ ಸಾಂಸ್ಕೃತಿಕ ಬದುಕಿಗೆ ಚೈತನ್ಯ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಈ ವರ್ಷ ವಿಶೇಷವಾಗಿ `ಸಾಂಸೃತಿಕ ಭಾರತ’, ಚಿಂತನ-ಮAಥನ, ಹರಿಕಥೆ, ಯಕ್ಷಗಾನ, ತಾಳಮದ್ದಲೆ, ಸುಗಮಸಂಗೀತ, ಭರತನಾಟ್ಯ, ವಿಚಾರ ಸಂಕಿರಣ, ಕವಿಗೋಷ್ಠಿ, ಸಂವಾದ, ಗಾನವೈಭವ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ೩೫ ವರ್ಷಗಳಿಂದ ಸುಮಾರು ೪೦-೫೦ ಕಾರ್ಯಕರ್ತರು ಅವಿರತ ಶ್ರಮಿಸಿ, ಇಲ್ಲಿಯವರೆಗಿನ ಉತ್ಸವವನ್ನು ಜನಪರವಾಗಿ ರೂಪಿಸಿದ್ದಾರೆ. ಇಂತಹ ಯಾವುದೇ ಉತ್ಸವಗಳಿಗೆ ಜನಬೆಂಬಲವಿಲ್ಲದಿದ್ದರೆ ಜನಪರವಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ನಮ್ಮ ಈ ಉತ್ಸವ ಜನರ ಉತ್ಸವವಾಗಿ ಮೂಡಿಬಂದಿದೆ. ನಮ್ಮ ಈ ತಂಡದ ಸದಸ್ಯರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ಮಾಡುತ್ತಿರುವುದೇ ಉತ್ಸವದ ಹಿರಿಮೆಗೆ ಕಾರಣವಾಗಿದೆ. ಅದರಲ್ಲೂ ಜಿಲ್ಲೆಯ ಸಹಕಾರಿ ಸಂಘ-ಸAಸ್ಥೆಗಳು ಮತ್ತು ದಾನಿಗಳ ಸಹಕಾರ ಅನನ್ಯವಾದುದು. ಇವರೆಲ್ಲರಿಗೂ ನಾನು ಮನದಾಳದಿಂದ ಅಭಿನಂದಿಸಲೇಬೇಕು. ಇಂತಹ ಜನಪರ ಉತ್ಸವಗಳು ನಿಲ್ಲಬೇಕಾದರೆ ಪ್ರತಿಯೊಬ್ಬರೂ ಕೈಜೋಡಿಸಲೇಬೇಕೆಂದು ಭಾವಿಸಿದ್ದೇನೆ. ಎಲ್ಲರಲ್ಲಿ ವಿನಂತಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಕಲ್ಪದ ಸಂಚಾಲಕ ಪ್ರಸಾದ ಹೆಗಡೆ, ವಿವಿಧ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ ಭಟ್ಟ ತಾರೀಮಕ್ಕಿ, ಎನ್.ಎಸ್.ಭಟ್ಟ ನಂದೊಳ್ಳಿ, ಸಿ.ಜಿ.ಹೆಗಡೆ ಯಲ್ಲಾಪುರ, ಬಾಬು ಬಾಂದೇಕರ, ಪ್ರದೀಪ ಯಲ್ಲಾಪುರಕರ ಮತ್ತಿತರರು ಉಪಸ್ಥಿತರಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ