
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಪುರುಷ ಪ್ರಧಾನ ವ್ಯವಸ್ಥೆ ಮಡುಗಟ್ಟಿರುವ ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಎಂಬ ಶಬ್ದ ತುಸು ಬಾಲಿಶ ಎನ್ನಬಹುದಾದರೂ ಸಬಲೀಕರಣದ ಅಗತ್ಯವನ್ನು ತೀರಾ ಅಲ್ಲಗಳೆಯುವಂತಿಲ್ಲ ಎಂದು ಸಿದ್ದಾಪುರದ ಉದ್ಯಮಿ ಮಮತಾ ಭಟ್ಟ ಶಮೆಮನೆ ಹೇಳಿದರು. ತಾಲೂಕಿನ ಕುಂದರಗಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಗ್ರಾಮ ಪಂಚಾಯತ ಕುಂದರಗಿ ಇವರ ಸಂಯುಕ್ತಾಶ್ರಯದಲ್ಲಿ ಶಿರಸಿಯ ಸ್ಕೋಡ್‌ವೆಸ್ ಸಹಯೋಗದೊಂದಿಗೆ ಮಹಿಳಾ ಕಿಸಾನ್ ದಿವಸದ ಪ್ರಯುಕ್ತ ಆತ್ಮ ಯೋಜನೆಯಡಿ ರೈತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕೌಶಲ್ಯಾಭಿವೃದ್ಧಿ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಬದಲಾಗುತ್ತಿರುವ ಇಂದಿನ ವೈಜ್ಞಾನಿಕ ಯುಗದಲ್ಲಿ ಲಭ್ಯವಿರುವ ಸಾಕಷ್ಟು ಅವಕಾಶಗಳನ್ನು ಮಹಿಳೆಯರು ಜಾಣ್ಮೆಯಿಂದ ಬಳಸಿಕೊಂಡು ಸಮಾಜಕ್ಕೆ ಒಳಿತು ಮಾಡುವ ಜೊತೆ, ತಾವೂ ಉನ್ನತ ಸ್ತರಕ್ಕೇರಬೇಕು ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸ್ಕೋಡ್‌ವೆಸ್ ವ್ಯವಸ್ಥಾಪಕ ಗಣಪತಿ ನಾಯ್ಕ ಮಾತನಾಡಿ, ಸಾಮಾಜಿಕ ಪರಿವರ್ತನೆಯ ಪ್ರಸ್ತುತ ದಿನಮಾನದಲ್ಲಿ ಮಹಿಳೆಯರು ಸರ್ಕಾರ ಮತ್ತು ಸಂಘ-ಸAಸ್ಥೆಗಳು ನೀಡುವ ನೆರವಿನೊಮದಿಗೆ ಸ್ವ-ಉದ್ಯೋಗ ಆರಂಭಿಸಿ; ತಾಳ್ಮೆ ಮತ್ತು ಆಸಕ್ತಿ ಕಳೆದುಕೊಳ್ಳದೇ ಮೌಲ್ಯವರ್ಧಕ ಉತ್ಪಾದನೆ ಮೂಲಕ ಆರ್ಥಿಕ ಸಬಲತೆ ಸಾಧಿಸಬಹುದು ಎಂದರು.
ಪ್ರಗತಿ ವಿದ್ಯಾಲಯದ ಬಾಲಕಿಯರ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮವನ್ನು ಪ್ರಗತಿಪರ ರೈತ ಮಹಿಳೆ ಜಯಶ್ರೀ ಹೆಗಡೆ ಉದ್ಘಾಟಿಸಿದರು.
ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಹೇರಂಬ ಹೆಗಡೆ, ಗ್ರಾಮ ಪಂಚಾಯತ ಸದಸ್ಯ ರಾಮಕೃಷ್ಣ ಹೆಗಡೆ, ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷರಾದ ದೀಪಾ ಸಿದ್ದಿ ಮಾತನಾಡಿದರು.ಸ್ಕೋಡ್‌ವೆಸ್ ಮಕ್ಕಳ ಸಹಾಯವಾಣಿ ಕುರಿತು ಉಮೇಶ ಮಾಹಿತಿ ನೀಡಿದರು.
ಕಾರ್ಯಕ್ರಮ ನಿರ್ವಹಿಸಿದ ಆತ್ಮಾ ಯೋಜನೆಯ ವ್ಯವಸ್ಥಾಪಕ ಎಂ.ಜಿ.ಭಟ್ಟ ಸ್ವಾಗತಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಪ್ರಕಾಶ ದಾಸನವರ ವಂದಿಸಿದರು.
ಗ್ರಾ.ಪA ಸದಸ್ಯರಾದ ಪ್ರಕಾಶ ನಾಯ್ಕ, ನಿರ್ಮಲಾ ನಾಯ್ಕ, ಸೌಮ್ಯಾ ನಾಯ್ಕ, ಯಮುನಾ ಸಿದ್ದಿ, ತುಂಗಾ ಚಲುವಾದಿ ಮತ್ತಿತರರು ಉಪಸ್ಥಿತರಿದ್ದರು.ಗ್ರಾ.ಪಂ ವ್ಯಾಪ್ತಿಯ ೫೦ ಮಹಿಳೆಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ