May 18, 2024

Bhavana Tv

Its Your Channel

ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕೆ.ಎಸ್.ಓ.ಯು ಕಲಿಕಾ ಕೇಂದ್ರ ಪ್ರಾರಂಭ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ
“ಕಲಿಕಾರ್ಥಿ ಸಹಾಯ ಕೇಂದ್ರ” ಪ್ರಾರಂಭಿಸಲು ಅನುಮತಿ ದೊರೆತಿದೆ. ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆಯುವವರಿಗೆ ಈ ಕಲಿಕಾ ಕೇಂದ್ರ ನೆರವಾಗಲಿದೆ. ಪದವಿ ಸ್ನಾತಕೋತ್ತರ ಪದವಿಗೆ
ಸಂಬAಧಿಸಿದ ಬಿ.ಎ, ಬಿ.ಕಾಂ, ಬಿ.ಲಿಬ್, ಬಿ.ಬಿ.ಎ ಹಾಗೂ ಬಿ.ಎಸ್ಸಿ ಪ್ರವೇಶ ಬಯಸುವ ಅಭ್ಯರ್ಥಿಗಳು ಇಲ್ಲಿ ದಾಖಲಾಗಬಹುದಾಗಿದೆ. ಸ್ನಾತಕೋತ್ತರ ಪದವಿಗೆ ಸಂಬAಧಿಸಿ ಎಂ.ಎ, ಎಂ.ಕಾo, ಎಂ.ಲಿಬ್ ಹಾಗೂ ಎಂ.ಎಸ್.ಇ ಕಲಿಕಾ ಕೇಂದ್ರವನ್ನು ತೆರೆಯಲಾಗಿದೆ. ಪದವಿ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂಕಪಟ್ಟಿ, ಆಧಾರ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳ ಜೊತೆ ಮೊಬೈಲ್ ನಂಬರನ್ನು ಹಾಗೂ ಇಮೇಲ್ ಐಡಿಯನ್ನು ನೀಡಬೇಕು. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವವರು ಈ ಎಲ್ಲಾ ದಾಖಲೆಗಳ ಜೊತೆ ಪದವಿ ಅಂಕಪಟ್ಟಿಯನ್ನು ಒದಗಿಸಬೇಕಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಸಕ್ತ ಅಭ್ಯರ್ಥಿಗಳು ನವೆಂಬರ ೧೮ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಹಾಯವಾಣಿ ಸಂಖ್ಯೆ: ೭೩೩೭೮೭೫೨೭೯ ಸಂಪರ್ಕಿಸುವoತೆ ಪ್ರಕಟಣೆ ತಿಳಿಸಿದೆ.

error: