

ಯಲ್ಲಾಪುರ; ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಯಲ್ಲಾಪುರದಿಂದ ಮೊದಲ ಬಾರಿಗೆ ಸ್ಪರ್ಧಿಸಿರುವ ಏಕೈಕ ಅಭ್ಯರ್ಥಿ ಸಾಹಿತ್ಯ ಸಂಘಟಕ ವೇಣುಗೋಪಾಲ ಮದ್ಗುಣಿ ಅವರಿಗೆ ಮತನೀಡಿ ಗೆಲ್ಲಿಸ ಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮನವಿ ಮಾಡಿದರು.
ಅವರು ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ,ವೇಣುಗೋಪಾಲ ಅವರು ಸಾಹಿತಿ ಅಲ್ಲದಿದ್ದರೂ,ಕಳೆದ ಐದು ವರ್ಷಗಳಿಂದ ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್‌ನ್ನು ಕ್ರೀಯಾಶೀಲವಾಗಿ ಮುನ್ನೆಡೆಸಿದ್ದಾರೆ.ನೂರಾರು ಮೌಲಿಕ ಕಾರ್ಯಕ್ರಮಗಳ ಮೂಲಕ ಕೆಲವೇ ಜನರಿಗೆ ಸೀಮಿತವಾಗಿದ್ದ ಪರಿಷತ್ತಿನ ಕಾರ್ಯಚಟುವಟಿಕೆಯನ್ನು ಸಮಾಜಮುಖಿಯಾಗಿ ವಿಸ್ತರಿಸಿದ್ದಾರೆ.ಕನ್ನಡ ಪರ ನಿಲುವಿನಿಂದ ನಲವತ್ತು ವರ್ಷಗಳ ನಂತರ ಯಲ್ಲಾಪುರದಲ್ಲಿ ಜಿಲ್ಲಾ ಸಮ್ಮೇಳನ ತಂದು ಯಶಸ್ವಿಯಾಗಿಸಿದ್ದಾರೆ.ಅವರನ್ನು ಬೆಂಬಲಿಸುವ ಮೂಲಕ ತಾಲೂಕಿಗೆ,ಜಿಲ್ಲೆಗೆ ಇನ್ನಷ್ಟು ಕನ್ನಡದ ಅಭಿವೃದ್ದಿಪರ ಕಾರ್ಯಗಳಾಗುವ ಬಗೆಗೆ ನೊಡಿಕೊಳ್ಳಬೇಕು ಎಂದರು.
ಸಹಕಾರಿ ಪ್ರೇಮಾನಂದ ನಾಯ್ಕ ಮಾತನಾಡಿ, ತಾಲೂಕಿನವರಾಗಿ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಿರುವುದು ಹೆಮ್ಮೆಯ ಸಂಗತಿ.ವೇಣುಗೋಪಾಲ ಸಾಹಿತ್ಯಿಕ ಸಂಘಟಕರಾಗಿ ಪರಿಷತ್‌ನ್ನು ಸಮರ್ಥವಾಗಿ ಕಾರ್ಯನಿರ್ವನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರನ್ನು ಮತದಾರರು ಆರಿಸುವ ಕೆಲಸ ಮಾಡಬೇಕೆಂದರು.
ಕಸಾಪ ಸದಸ್ಯ ನಾಗೇಶ ಯಲ್ಲಾಪುರಕರ್ ಮಾತನಾಡಿ, ವೇಣುಗೋಪಾಲ ಐದು ವರ್ಷಗಳ ಕಾಲ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ ನ್ನು ಮಾದರಿಯಾಗಿ ಮುನ್ನಡೆಸಿದ್ದಾರೆ ಎಂದರು.
ಅAಬೇಡ್ಕರ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೇವಣಕರ್,ಸಂಘಟಕ ಬಾಬು ಬಾಂದೇಕರ ಅವರು ವೇಣುಗೋಪಾಲ ಅವರನ್ನು ಬೆಂಬಲಿಸಲು ಮನವಿ ಮಾಡಿದರು..
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ