May 5, 2024

Bhavana Tv

Its Your Channel

ಉಸ್ತುವಾರಿ ಸಚಿವರ ಬದಲಾವಣೆ ಮುಖ್ಯ ಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ-ಬಿ.ಜೆ.ಪಿ ಹಿರಿಯ ಕಾರ್ಯಕರ್ತ ರಾಮು ನಾಯ್ಕ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಇರುವಾಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದೆ. ಇದೊಂದು ಸಂಘಟನಾತ್ಮಕ ಪ್ರಕ್ರೀಯೆ. ಕೇವಲ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯ ಬದಲಾವಣೆ ಕಂಡಿದೆ. ಉಸ್ತುವಾರಿ ಸಚಿವರ ಹುದ್ದೆ ಸಾಂವಿಧಾನಿಕ ಹುದ್ದೆಯಂತೂ ಅಲ್ಲ. ಮುಖ್ಯಮಂತ್ರಿಗಳಿಗೆ ತಮ್ಮ ವಿವೇಚನೆಯ ಮೆರೆಗೆ ಯಾವುದೇ ಬದಲಾವಣೆಯನ್ನೂ ಮಾಡಲು ಹಕ್ಕಿದೆ. ಸದ್ಯ ರಾಜ್ಯ ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಮತ್ತು ರಾಜ್ಯದಲ್ಲಿ ಕರೋನಾ ಪಿಡುಗು ಮತ್ತೇ ಉಲ್ಭಣಿಸುತ್ತಿರುವುದರಿಂದ, ಸಂಘಟನೆ ಮತ್ತು ಪರಿಣಾಮಕಾರಿ ಉಪಶಮನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಇಡೀ ರಾಜ್ಯದಲ್ಲಿ ಈ ಬದಲಾವಣೆ ಮಾಡಿರಬಹುದು. ಇಲ್ಲಿ ಶಿವರಾಮ ಹೆಬ್ಬಾರ ಅಥವಾ ಕೋಟಾ ಶ್ರೀನಿವಾಸ ಪೂಜಾರಿ ಇಬ್ಬರೂ ನಮ್ಮವರೇ. ಯಾವುದೇ ಬದಲಾವಣೆ ಜನಸಾಮಾನ್ಯರಿಗೆ ಒಳ್ಳೆಯದು ಮಾಡಲಿ ಎಂದು ಯಲ್ಲಾಪುರದ ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾದ ರಾಮು ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

error: