May 3, 2024

Bhavana Tv

Its Your Channel

ಕರಾವಳಿ ಭಾಗದಲ್ಲಿ ಗೇರು ಬೀಜ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಉಚಿತ  ಬಸ್ ಪಾಸ್ – ಸಚಿವ ಶಿವರಾಮ ಹೆಬ್ಬಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ನಗರದ ಯಶವಂತಪುರ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿಯಲ್ಲಿ ಮಂಡಳಿಯ 92 ನೇ ಸಭೆಯನ್ನು ನಡೆಸಿದರು.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ, ಮಾಲಿಕ ಮತ್ತು ಸರಕಾರದ ಅನುಪಾತ 20 ರೂ, 40 ರೂ 20 ರೂ ವಂತಿಕೆ ಪಾವತಿ ಮಾಡಲಾಗುತ್ತಿತ್ತು. ಅದನ್ನು 50 ರೂ, 100 ರೂ 50 ರೂ ಪರಿಷ್ಕರಣೆ ಮಾಡಬೇಕೆಂದು ನಡೆದ ಚರ್ಚೆಯಲ್ಲಿ. ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರ, ಈಗಾಗಲೆ ಕೋವಿಡ್ ಸೋಂಕಿನ ಬಾರ ಎಲ್ಲರ ಮೇಲೆ ಇರುವುದುರಿಂದ, ಈಗಲೇ ಹೊರೆ ಹಾಕುವುದು ಬೇಡ, ಜುಲೈ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ದಕ್ಷಿಣ ಕನ್ನಡದ 18, ಉಡುಪಿಯ 17, ಉತ್ತರ ಕನ್ನಡದ 4 ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಒಟ್ಟು 3425 ಮಹಿಳೆಯರಿಗೆ , ಉಚಿತ ಬಸ್ ಪಾಸ್ ನೀಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿದ 21 ಸಾವಿರ ರೂ ಇದ್ದ, ವೇತನವನ್ನು 26 ಸಾವಿರ ರೂ ಕ್ಕೆ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ ,ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ, ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪಾಪಣ್ಣ , ಮಹಿಳಾ ಸದಸ್ಯರಾದ ಲಾವಣ್ಯ ಹಾಗೂ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿ ಚಿದಾನಂದ ಹಾಗೂ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಪ್ರತಿನಿಧಿ, ಹಿಂದ ಮಜದೂರ ಕಿಸಾನ ಸಮಿತಿ ಪ್ರತಿನಿಧಿಗಳು, ಭಾರತ ಮಜದೂರ ಸಂಘಟನೆಯ ಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರೆಂದು ಸಚಿವರ ಕಛೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: