May 19, 2024

Bhavana Tv

Its Your Channel

ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಸೌಲಭ್ಯಗಳ ವಿತರಣೆ

ವರದಿ ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ರೈತರಿಗೆ ವಿತರಣೆ ಮಾಡಿದರು. ಸದರಿ ಸಮಾರಂಭದಲ್ಲಿ ಸುಮಾರು 15 ಜನ ರೈತರಿಗೆ ತುಂತುರು ನೀರಾವರಿ ಘಟಕ, 10 ಜನ ರೈತರಿಗೆ ತಾಡಪತ್ರೆ, 5 ಜನ ರೈತರಿಗೆ ಪವರ ಟಿಲ್ಲರ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಒಳಗೊಂಡAತೆ ವಿತರಣೆ ಮಾಡಿದರು. ಇದಲ್ಲದೇ ಕೃಷಿ ಯಾಂತ್ರೀಕರಣ ಯೋಜನೆಯ ಗ್ರಾಮೀಣ ಕೃಷಿ ಯಂತ್ರದಾರೆ ಘಟಕದಡಿ ಸೇವಾ ಸಹಕಾರಿ ಸಂಘ ಹಾಸಣಗಿ ಹಾಗೂ ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆ, ಉಮ್ಮಚಗಿ ಇವರಿಗೆ ತಲಾ ರೂ 8.00 ಲಕ್ಷಗಳ ಸಹಾಯಧನಕ್ಕೆ ಕಾರ್ಯಾದೇಶ ಪತ್ರವನ್ನು ನೀಡಿದರು. ಸಮಾರಂಭದಲ್ಲಿ ಮಾತನಾಡುತ್ತ ಸಚಿವರು ರೈತರಿಗಾಗಿ ಸರ್ಕಾರ ಸಾಕಷ್ಟು ಆದ್ಯತೆ ನೀಡಿ ಅನೇಕ ಸೌಲಭ್ಯಗಳನ್ನು ತಲುಪಿಸುತ್ತಿದೆ. ಕೃಷಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಂಬAಧಿಸಿದAತೆ ಹಲವಾರು ತಾಂತ್ರಿಕ ತೊಡಕುಗಳಿದ್ದು, ನಿವಾರಣೆಗಾಗಿ ಕೃಷಿ ಸಚಿವರೊಂದಿಗೆ ಮಾತನಾಡುವದಾಗಿ ತಿಳಿಸಿದರು. ಸಮಾರಂಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರಿ ಸುನಂದ ದಾಸ, ತಾಲೂಕಾ ಕೃಷಿಕ ಸಮಾಜದ ಉಪಾದ್ಯಕ್ಷರ ದ ವೆಂಕಟ್ರಮಣ ಭಟ್ಟ ಕಾರೆಮನೆ, ಆತ್ಮ ಯೋಜನೆಯ ತಾಲೂಕು ರೈತ ಸಲಹಾ ಸಮಿತಿ ಅಧ್ಯಕ್ಷ ಗಣೇಶ ಹೆಗಡೆ ಪಣತಗೇರಿ, ರೈತರು, ರೈತ ಫಲಾನುಭವಿಗಳು, ಪತ್ರಿಕಾ ಮಾಧ್ಯಮದವರು ಹಾಗೂ ಕೃಷಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ ನಾಯ್ಕ ಸ್ವಾಗತಿಸಿ ಇಲಾಖೆಯ ಯೋಜನೆಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು

error: