May 19, 2024

Bhavana Tv

Its Your Channel

ಹೊಸದಾಗಿ ಸೊಪ್ಪಿನಬೆಟ್ಟದಲ್ಲಿ ರಸ್ತೆ ಮಾಡಿರುವ ಕ್ರಮದ ಕುರಿತು ಸಾಮಾಜಿಕ ಕಾರ್ಯಕರ್ತ ನರಸಿಂಹ ವಿಶ್ವೇಶ್ವರ ಗಾಂವ್ಕಾರ ಬಾಗಿನಕಟ್ಟಾ ತೀವ್ರ ಖಂಡನೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಗಿನಕಟ್ಟಾದಿಂದ ಕಳಚೆಗೆ ಈ ಗಾಗಲೇ ಎರಡು ರಸ್ತೆ ಇದ್ದಾಗ್ಯೂ,ರಸ್ತೆ ಶಾರ್ಟಕಟ್ ಮಾಡುವ ಭರದಲ್ಲಿ ಹೊಸದಾಗಿ ಸೊಪ್ಪಿನಬೆಟ್ಟದಲ್ಲಿ ರಸ್ತೆ ಮಾಡಿರುವ ಕ್ರಮವನ್ನು ಸಾಮಾಜಿಕ ಕಾರ್ಯಕರ್ತ ನರಸಿಂಹ ವಿಶ್ವೇಶ್ವರ ಗಾಂವ್ಕಾರ ಬಾಗಿನಕಟ್ಟಾ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿ,”ಕಳಚೆ ಭಾಗದ ಕೆಲ ಜನರ ಹುನ್ನಾರ ದಿಂದ ಎರಡೆರಡು ರಸ್ತೆ ಇದ್ದಾಗ್ಯೂ ತಮ್ಮ ಸೊಪ್ಪಿನಬೆಟ್ಟದಿಂದ ಪ್ರತ್ಯೇಕ ರಸ್ತೆ ಮಾಡಿದ್ದಾರೆ.ಇದು ಸರಿಯಾದ ಕ್ರಮ ಅಲ್ಲ.ಹಳೆಯ ರಸ್ತೆಯಂತೆ ಹೊಸ ರಸ್ತೆ ಸುರಕ್ಷಿತವೂ ಅಲ್ಲ.ಹೊಸ ರಸ್ತೆಯಿಂದಾಗಿ ಮಳೆಗಾಲದಲ್ಲಿ ಭೂಕುಸಿತವಾಗಿ ನೀರಿನ ಕಾಲುವೆ,ಹಳೆರಸ್ತೆಗೆ ಧಕ್ಕೆ ಆಗಿ,ಅಯೋಮಯ ಉಂಟಾಗುವ ಸಾಧ್ಯತೆ ಇದೆ.ಕಾರಣ ಮೂಲ ರಸ್ತೆಯನ್ನು ಮಾತ್ರ ಸಿಂಧುವಾಗಿ ಪರಿಗಣಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಳಚೆ ಭಾಗದಿಂದ ಬಾಗಿನಕಟ್ಟಾ ಗ್ರಾಮಕ್ಕೆ ಕಳೆದ ನಲವತ್ತು ವರ್ಷಗಳ ಹಿಂದೆಯೇ ತಾಲೂಕಾ ಬೋರ್ಡ ಸದಸ್ಯ ವಿ.ಎನ್.ಭಟ್ಟ ಉಪಾದ್ಯ ಅವರು ರಸ್ತೆ ಸಂಪರ್ಕ ಕಲ್ಪಿಸಿದ್ದರು.ಅದು ಬಾಗಿನಕಟ್ಟಾದ ಸರ್ವೆ ನಂಬರ ೨೫ ಮತ್ತು೨೪ ಮಧ್ಯದಲ್ಲಿದ್ದು ಈವರೆಗೂ ಕಚ್ಚಾರಸ್ತೆಯಾಗಿ ಖಾಯಂ ವಾಹನ ಓಡಾಟ ನಡೆಸಲಾಗುತ್ತಿದೆ.ಅಲ್ಲದೇ ಸರ್ವೆನಂಬರ ೨೩ ರ ಹೊರಗಿನಿಂದ ಸ್ಥಳಿಯರು ಶ್ರಮದಿಂದ ನಿರ್ಮಿಸಿದ ಮತ್ತೊಂದು ರಸ್ತೆ ಇದೆ.ಬಾಗಿನಕಟ್ಟಾದಿಂದ ಕಳಚೆಗೆ ಎರಡು ರಸ್ತೆ ಕಾರ್ಯಾಚರಿಸುತ್ತಿದೆ.ಹೀಗಿರುವಾಗ ಕಳೆದ ವರ್ಷ ಭೂಕುಸಿತದಿಂದ ಅತಂತ್ರ ಸಂದರ್ಭದಲ್ಲಿ ಬೀಗಾರ ಮುಖ್ಯರಸ್ತೆಯಿಂದ ಬಾಗಿನಕಟ್ಟಾ ಮೂಲಕ ಕಳಚೆಗೆ ಹೋಗಲು ಸರ್ವ ಋತು ರಸ್ತೆ ಮಾಡಲು ಪ್ರಕೃತಿ ವಿಕೋಪ ನಿಧಿಯಿಂದ ಮುಂದಾಗಿದ್ದು,ಸ.ನA ೨೪-೨೫ ರ ಹೊಂದಿನಲ್ಲಿರುವ ರಸ್ತೆ ಸುರಕ್ಷಿತವಾಗಿದೆ .ಈ ಮೂಲ ರಸ್ತೆಯ ಅಭಿವೃದ್ದಿ ಆಗಬೇಕು ಎನ್ನುವ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಈ ಹಿಂದೆ ಪತ್ರ ಬರೆದು ಆಗ್ರಹಿಸಿದ್ದು ಇರುತ್ತದೆ.ಅದಕ್ಕೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರು ಶಿರಸಿ ಅವರಿಗೆ ಸೂಚಿಸಿದ್ದು ಇರುತ್ತದೆ.
ಕಳೆದ ಮಳೆಗಾಲದ ಪ್ರಕೃತಿ ವಿಕೋಪದ ದುರ್ಲಾಭ ಪಡೆಯುವ ಸಲುವಾಗಿ ಕಳಚೆ ಭಾಗದ ಕೆಲವರ ಹಿತಾಸಕ್ತಿಯಿಂದ ರಸ್ತೆ ಶಾರ್ಟಕಟ್ ಮಾಡುವ ಪ್ರಯತ್ನವಾಗಿ ತಮ್ಮ ಸೊಪ್ಪಿನ ಬೆಟ್ಟದಲ್ಲಿ ಬೆಳಸಿದ ಗೇರು,ಮಾವು ಇತ್ಯಾದಿ ಗಿಡಗಳನ್ನು ನಾಶಮಾಡಿ,ರಸ್ತೆ ನಿರ್ಮಿಸಿದ್ದಾರೆ. ಇದರಿಂದ ತಮಗೆ ನಷ್ಟ ಉಂಟಾಗಿದ್ದಲ್ಲದೇ,ಇಳಿ ವಯಸ್ಸಿನಲ್ಲಿ ಮಾನಸಿಕ ಕಿರಿಕಿರಿ ಉಂಟುಮಾಡಿದ್ದಾರೆ.ಎರಡೆರಡು ರಸ್ತೆ ಇರುವಾಗ ಶಾರ್ಟಕಟ್ ನೆಪದಲ್ಲಿ ಮತ್ತೊಂದೆಡೆ ರಸ್ತೆ ಮಾಡಿರುವುದು ಸರಿಯಲ್ಲ.ಸುರಕ್ಷಿತವೂ ಅಲ್ಲ. ಕಾರಣ ಮೂಲ ರಸ್ತೆಯನ್ನೆ ಸರ್ವ ಋತು ರಸ್ತೆಯಾಗಿ ಮಾನ್ಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.

error: