
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಜೀವನ ವಿಕಾಸ ಟ್ರಸ್ಟ್ (ರಿ) ಯಲ್ಲಾಪುರ ಹಾಗೂ ಯಲ್ಲಾಪುರ ಅರಣ್ಯ ವಿಭಾಗ ಇವರ ಸಹಯೋಗದಲ್ಲಿ ತಾಲ್ಲೂಕಿನ ಬಳಗಾರದಲ್ಲಿ ನಡೆದ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಬೀಜಬಿತ್ತನೆ ಮಾಡುವುದರ ಮೂಲಕ ಯಶಸ್ವಿಗೊಳಿಸಿದರು . ಹಾಗೂ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜೀವನ ವಿಕಾಸ ಟ್ರಸ್ಟ್ ನ ಉಪಾಧ್ಯಕ್ಷರಾದ ಶಂಕರ ಸಿದ್ದಿ ಬಳಗಾರ,ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಆರ್ ಹಳೆಮನೆ, ವಲಯ ಅರಣ್ಯಾಧಿಕಾರಿಯವರಾದ ಪ್ರಸಾದ್ ಪೆಡ್ನೇಕರ್ ಹಾಗೂ ಯುವಕ ಸಂಘದ ಅಧ್ಯಕ್ಷರಾದ ಗಿರೀಶ್ ಭಟ್ ಜೀವನ ವಿಕಾಸ ಟ್ರಸ್ಟ್ ನ ವಿಶ್ವಸ್ಥರಾದ ಪರಶುರಾಮ ಸಿದ್ದಿ, ಅರಣ್ಯ ಇಲಾಖೆ ಸಿಬ್ಬಂದಿಗಳು , ಬಳಗಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಅನಂತ ಭಟ್ ಕರಾಳಮನೆ, ಪ್ರಮುಖರಾದ ಬಾಬು ಸಿದ್ದಿ, ರಾಮಾ ಸಿದ್ದಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ