April 29, 2024

Bhavana Tv

Its Your Channel

ಮಳೆಗಾಲದ ಪೂರ್ವ ಸ್ವಚ್ಛಗೊಳ್ಳುತ್ತಿರುವ ಉಮ್ಮಚ್ಗಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಳೆದ ಎರಡು ವರ್ಷಗಳಿಂದ ಸ್ವಚ್ಛಗೊಳಿಸದೆ ಯಲ್ಲಾಪುರದಿಂದ ಸಿರ್ಸಿಗೆ ಹೋಗುವ ಮುಖ್ಯ ರಸ್ತೆಯ ಅಕ್ಕ ಪಕ್ಕದ ಗಟಾರಗಳು ಕೊಳೆ ತುಂಬಿಕೊAಡಿದ್ದವು. ಒಂದು ಮಳೆ ಸುರಿದರೆ ಸಾಕು ಚರಂಡಿಯಲ್ಲಿ ಹೋಗಬೇಕಾದ ಕೊಳಕು ನೀರು ಉಮ್ಮಚ್ಗಿ ಊರಿನ ದೇವಸ್ಥಾನ, ಸಂಸ್ಕೃತ ಪಾಠಶಾಲೆ,ಆಯುರ್ವೇದ ಆಸ್ಪತ್ರೆ, ಕೆ.ವಿ.ಜಿ.ಬ್ಯಾಂಕ್, ಸಂತೆ ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ಹರಿದು ಜನರ ನಿತ್ಯದ ಬದುಕಿಗೆ ತೊಂದರೆ ಉಂಟುಮಾಡುತ್ತಿತ್ತು.
ಕಳೆದೆರಡು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಗೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದನ್ನು ಗಮನಿಸಿದ, ಇತ್ತೀಚೆಗಷ್ಟೇ ಪ್ರಭಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪಿ.ಡಿ.ಒ. ಗೋವಿಂದ ಜಿ.ಶೆಟ್ಟಿ ಅವರು ಉಮ್ಮಚ್ಗಿ ಗ್ರಾಮ ಪಂಚಾಯತ ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ,ಲಲಿತಾ ವಾಲೀಕಾರ ಅಧ್ಯಕ್ಷರಾದ ರೂಪಾ ಪೂಜಾರಿ ಅವರೊಂದಿಗೆ ಸೇರಿ ಲೋಕೊಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ ವಿ.ಎಂ.ಭಟ್ಟ ಮತ್ತು ಸಹಾಯಕ ಇಂಜಿನಿಯರ್ ಪ್ರಶಾಂತ ಅವರುಗಳ ಸಹಕಾರದೊಂದಿಗೆ ಗಟಾರ ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಲಾಯಿತಲ್ಲದೆ, ಅದು ಸಾರ್ವಜನಿಕರ ಮೆಚ್ಚುಗೆ ಮತ್ತು ಶ್ಲಾಘನೆಗೆ ಪಾತ್ರವಾಯಿತು.

error: