May 12, 2024

Bhavana Tv

Its Your Channel

ಓಂಕಾರ ಯೋಗ ಚಿಕಿತ್ಸಾ ಕೇಂದ್ರದಿoದ ಯಶಸ್ವಿಯಾಗಿ ಮುಕ್ತಾಯಗೊಂಡ ಯೋಗ ಶಿಬಿರ

ವರದಿ: ವೇಣುಗೋಪಾಲ ಮದ್ಗುಣಿ

ಓಂಕಾರ ಯೋಗ ಚಿಕಿತ್ಸಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 15 ದಿನಗಳ ಯೋಗ ತರಬೇತಿ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಯಿತು.
ಕಳೆದ ನಾಲ್ಕು ದಶಕಗಳಿಂದ ಯೋಗ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹೊನ್ನಾವರದ ಯೋಗ ಗುರು ಗಣೇಶ ಯಾಜಿಯವರು ಮನಮುಟ್ಟುವ ರೀತಿಯಲ್ಲಿ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ದೀಪ ಬೆಳಗುವದರ ಮೂಲಕ ಯೋಗ ತರಬೇತಿ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿದ ಪಿ.ಯು. ವಿಭಾಗದ ನಿವೃತ್ತ ಉಪ ನಿರ್ದೇಶಕ ಕೆ.ಟಿ.ಭಟ್, ಗಣೇಶ ಯಾಜಿಯವರು ಯೋಗದ ನಿಘಂಟು ಇದ್ದಂತೆ. ಸಮಾಜದ ಅಮೂಲ್ಯ ಆಸ್ತಿಯಂತಿರುವ ಯಾಜಿಯವರ ಯೋಗ ಅನುಭವ ಎಲ್ಲರಿಗೂ ಮಾರ್ಗದರ್ಶಿಯಾಗಲಿ ಎಂದರು. ಇದೇ ಸಂದರ್ಭದಲ್ಲಿ ಅವರು ಯಾಜಿಯವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ ಯಾಜಿ, ಯೋಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು ಎಂದರಲ್ಲದೇ ಪ್ರತಿನಿತ್ಯ ಯೋಗ ಸಾಧನೆ ಮಾಡುವ ಮೂಲಕ ಗುರುದಕ್ಷಿಣೆ ನೀಡಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ, ಯೋಗದ ಮಹತ್ವ ತಿಳಿಸಿದರು. ಕರಡೊಳ್ಳಿ ಗೋಶಾಲೆಯ ಕಾರ್ಯದರ್ಶಿ ರಾಮಕೃಷ್ಣ ಭಟ್ ಕವಡಿಕೆರೆ, ಪತಂಜಲಿ ಕೇಂದ್ರದ ಮಹಿಳಾ ಪ್ರಭಾರಿ ಶೈಲಜಾ ಭಟ್, ಆದರ್ಶ ಮಹಿಳಾ ಮಂಡಳದ ಅಧ್ಯಕ್ಷರಾದ ಉಷಾ ಗಾಂವಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಭಾಸ್ಕರ ನಾಯ್ಕ, ಗಾಯತ್ರಿ ಹೆಗಡೆ, ಆಶಾ ಬಗನಗದ್ದೆ ಶಿಬಿರದ ಅನುಭವ ಹಂಚಿಕೊAಡರು. ಶಿವರಾಮ ಭಟ್ ಹುಲಿಮನೆ ಸ್ವಾಗತಿಸಿದರು, ಓಂಕಾರ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಸುಬ್ರಾಯ ಭಟ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಕೊನೆಯಲ್ಲಿ ವಂದಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

error: