
ವರದಿ:- ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮಳಗಿಯಲ್ಲಿರುವ ನವೋದಯ ಶಾಲೆಗೆ ನಗರದಲ್ಲಿರುವ “ಯೋಗೀಶ ಶಾನಭಾಗ”ರವರ ಯೋಗಿ ಟಾಪ್ಪರ್ಸ ಪಾಯಿಂಟ ವತಿಯಿಂದ ಪರೀಕ್ಷೆ ಗೆ ಕುಳಿತ 5 ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಯಲ್ಲಾಪುರದಲ್ಲಿ ಪ್ರಥಮ ಬಾರಿಗೆ ಯೋಗೀಶ್ ಶಾನಭಾಗರ ಪ್ರಯತ್ನದಿಂದಾಗಿ ಇಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ದಾಖಲೆ.ಕಳೆದ ಸಲವೂ ಎರಡು ವಿಧ್ಯಾರ್ಥಿಗಳು ನವೋದಯಕ್ಕೆ ಆಯ್ಕೆಯಾಗಿದ್ದರು.ಅತಿ ಕಡಿಮೆ ದರದಲ್ಲಿ ವಿಧ್ಯಾರ್ಥಿಗಳಿಗೆ ಟ್ಯೂಶನ್ ನೀಡುವದರಿಂದ ಬಡ ಮಕ್ಕಳಿಗೆ ಇದರಿಂದ ಅನುಕೂಲ ವಾಗುವುದು. ಈ ಬಗ್ಗೆ ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ವಿಶ್ರಾಂತ ಪ್ರಾಂಶುಪಾಲರಾದ ಬೀರಣ್ಣ ನಾಯ್ಕ ಮೊಗಟಾ ಆಯ್ಕೆಯಾದ ಮಕ್ಕಳನ್ನು ಅಭಿನಂದಿಸಿದ್ದಾರೆ.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ