May 21, 2024

Bhavana Tv

Its Your Channel

ಯಲ್ಲಾಪುರದಲ್ಲಿ ಉಜ್ವಲ ಭಾರತ ಉಜ್ವಲ ಭವಿಷ್ಯ ಯೋಜನೆ ಉದ್ಘಾಟನೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ವಿದ್ಯುತ್ ಕ್ಷೇತ್ರದಲ್ಲಿ ತ್ಯಾಗ ಮಾಡಿದ ಜಿಲ್ಲೆ ಇದರ ನಡುವೆ ಜನರಿಗೆ ಸೌವಲತ್ತು ಕೊಡುವ ದೃಷ್ಟಿಯಿಂದ ಉಜ್ವಲ ಭಾರತ ಯೋಜನೆಯಲ್ಲಿ ಹಲವಾರು ಸುಧಾರಣೆ ತರಲಾಗಿದೆ ಎಂದು
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ ಇಲಾಖೆ,ಕೆಪಿಟಿಸಿಎಲ್,ಹೆಸ್ಕಾಂ ಇವರ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ನಡೆದ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಹೆಸ್ಕಾಂ ಹಲವಾರು ಅಭಿವೃದ್ದಿ ಕಾರ್ಯಮಾಡಿದೆ.ಲೈನ್ ಮೆನ್ ಗಳ ಕೊರತೆ ಇತ್ತು.ಬಹುತೇಕ ಹುದ್ದೆ ಭರ್ತಿ ಗೆ ಯಶಸ್ವಿಯಾಗಿದ್ದೇವೆ.ಕೆಲಸ ಪಾರದರ್ಶಕವಾಗಿ ಮಾಡಿದ್ದೇವೆ.ಅದರ ಬಗ್ಗೆ ಜನರಿಗೆ ತಿಳಿಸುವ ಜಾಗ್ರತಿ ಕೆಲಸ ಆಗಬೇಕಾಗಿದೆ.ಉ.ಕ ವಿದ್ಯುತ್ ಕ್ಷೇತ್ರದ ಬೆಳವಣಿಗೆ ಗುತ್ತಿಗೆದಾರರು,ಅಧಿಕಾರಿಗಳು ಮಾಡಿದ್ದಾರೆ.ಕಟ್ಟಕಡೆಯ ಗ್ರಾಮಾಂತರ ಪ್ರದೇಶದ ಜನರಿಗೆ ಬೆಳಕು ಕೊಡುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿಆಗಬೇಕು.ತ್ಯಾಗ ಮಾಡಿದ ಜಿಲ್ಲೆಗೆ ನ್ಯಾಯ ಕೊಡುವ ಕೆಲಸ ಅಧಿಕಾರಿಗಳು ಮಾಡಿ,ವಿದ್ಯುತ್ ಕ್ಷೇತ್ರದ ಒಳಿತಿಗೆ ಶ್ರಮಿಸಬೇಕು ಎಂದರು.

ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಶ್ಯಾಮಲಿ ಪಾಠಣಕರ,ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಶೆಟ್ಟಿ,ವಿಜಯ ಮಿರಾಶಿ,ವಿವಿಧ ಗ್ರಾಮ ಪಂಚಾಯತ ಜನಪ್ರತಿನಿಧಿಗಳು,ಹೆಸ್ಕಾಂ ಅಧಿಕಾರಿಗಳು,ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.

ಹೆಸ್ಕಾಂ ಅಧಿಕ್ಷಕ ಇಂಜಿನೀಯರ್ ದೀಪಕ ಕಾಮತ್ ಪ್ರಸ್ತಾಪಿಸಿ,ಕೇಂದ್ರ ರಾಜ್ಯ ಸರಕಾರ ಸ್ಥಳಿಯವಾಗಿ ವಿದ್ಯುತ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪ್ರಚುರ ಪಡಿಸಲು ವಿದ್ಯುತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಮನೆಗಳ ವಿದ್ಯುತ್ತಿಕರಣ ಕಿರುಚಿತ್ರ,ಒಂದು ರಾಷ್ಟ್ರ ಒಂದು ವಿದ್ಯುತ್ ಜಾಲ, ಗ್ರಾಹಕರ ಹಕ್ಕುಗಳು, ನವೀಕರಿಸ ಬಹುದಾದ ಇಂಧನ, ವಿದ್ಯುತ್ ಸಾಮರ್ಥ್ಯ ವೃದ್ದಿಸುವ ಕಿರುಚಿತ್ರ ಪ್ರದರ್ಶನ,ನುಕ್ಕಡ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ವಿನಾಯಕ ಪೇಟಕರ ನಿರೂಪಿಸಿದರು.ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಕೋಟ,ಸ್ಪೀಕರ ವಿಶ್ವೇಶ್ವರ ಹೆಗಡೆ,ಇಂಧನ ಸಚಿವ ಸುನಿಲ ಕುಮಾರ ಸೇರಿದಂತೆ ಜಿಲ್ಲೆಯ ಶಾಸಕರು,ಜನಪ್ರತಿನಿಧಿಗಳು ಗೈರಾಗಿರುವುದು ಕಂಡುಬAತು.

error: