April 10, 2025

Bhavana Tv

Its Your Channel

ಯಲ್ಲಾಪುರ ತಾಲೂಕಿನ ಕ್ರೀಡಾಂಗಣಕ್ಕೆ 97.50 ಲಕ್ಷ ರೂಪಾಯಿ ಅನುದಾನ ಮಂಜೂರು

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರ ಅವರ ಪ್ರಯತ್ನದ ಫಲವಾಗಿ ತಾಲೂಕಾ ಕ್ರೀಡಾಂಗಣ ಅಭಿವೃದ್ಧಿಗೆ 97.50 ಲಕ್ಷ ರೂಪಾಯಿ ಅನುದಾನವು ಮಂಜೂರಾಗಿದ್ದು, ಈ ಅಭಿವೃದ್ಧಿ ಯೋಜನೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗೂ ಸಹ ಅನೂಕಲವಾಗುವ ರೀತಿಯಲ್ಲಿ ಮೈದಾನವನ್ನು ಅಭಿವೃದ್ಧಿ ಪಡಿಸುವಂತೆ ” ಕ್ರಿಕೆಟ್ ಆಟಗಾರರು ಹಾಗೂ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ” ನ ಪದಾಧಿಕಾರಿಗಳು ಯುವನಾಯಕರಾದ ವಿವೇಕ ಹೆಬ್ಬಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಸಚಿವರ ಗಮನಕ್ಕೆ ತರುವಂತೆ ತಿಳಿಸಿ, ಸುದೀರ್ಘವಾಗಿ ಮೈದಾನ ಅಭಿವೃದ್ಧಿ ಕುರಿತು ಚರ್ಚಿಸಿದರು.ಕ್ರಿಕೆಟ್ ಆಟಗಾರನ್ನು ಉದ್ದೇಶಿಸಿ ಮಾತನಾಡಿದ ಯುವನಾಯಕರಾದ ವಿವೇಕ್ ಹೆಬ್ಬಾರ ಅವರು ತಾಲೂಕಾ ಕ್ರೀಡಾಂಗಣದ ಅಭಿವೃದ್ಧಿಗೆ ತಜ್ಞ ಹಿರಿಯ ಕ್ರೀಡಾಪಟುಗಳಿಂದ ಮಾಹಿತಿಯನ್ನು ಪಡೆಯಲಾಗುವುದು ಹಾಗೂ ಕ್ರಿಕೆಟ್ ಜೊತೆಗೆ ಎಲ್ಲಾ ಅಥ್ಲೆಟಿಕ್ಸ್ ಕ್ರೀಡೆಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುವುದು, ತಾಲೂಕಿನ ಕ್ರಿಕೆಟ್ ಆಟಗಾರರಿಗೆ ಅನೂಕುಲವಾಗುವ ದೃಷ್ಟಿಯಿಂದ ನೆಟ್ ವ್ಯವಸ್ಥೆಯನ್ನು ತಮ್ಮ ಕಂಪನಿಯ ಮೂಲಕವಾಗಿ ಮಾಡಿಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ನಾಗರಾಜ ಕವಡಿಕೆರೆ, ಎಮ್.ಎನ್.ಭಟ್ ನಂದೊಳ್ಳಿ, ನಾಗರಾಜ ಮದ್ಗುಣಿ, ಪಟ್ಟಣ ಪಂಚಾಯತ ಸದಸ್ಯರಾದ ಸತೀಶ್ ನಾಯ್ಕ, ಶಿಕ್ಷಕರಾದ ಮಾರುತಿ ನಾಯ್ಕ, ರಾಘು ಜಡ್ಡಿಪಾಲ್, ಅಸೋಸಿಯೇಷನ್ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

error: