May 21, 2024

Bhavana Tv

Its Your Channel

ಸ್ವರ್ಣವಲ್ಲಿ ಮಠದ ನಿಯೋಗದಿಂದ ಕಳಚೆ ಸಂತ್ರಸ್ತರ ಪರಿಹಾರ ಸಭೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಕಳಚೆಯ ಭೂಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಯಿತು.
ವ್ಯವಸ್ಥಿತವಾದ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸಲು ಕಳಚೆ ಭಾಗದ ಗ್ರಾಮಸ್ಥರ ಒಕ್ಕೋರಲಿನ ಒಮ್ಮತದ ಅಭಿಪ್ರಾಯ ಬುಧವಾರದ ಸಭೆಯಲ್ಲಿ ಪ್ರಮುಖವಾಗಿ ವ್ಯಕ್ತವಾಗಿದೆ. ಕಳೆದ ವರ್ಷದ ಭೂಕುಸಿತದಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ ಸರಕಾರ ಘೋಷಿಸಿದ ಪರಿಹಾರ ಶೀಘ್ರ ಬಿಡುಗಡೆ ಆಗಬೇಕು. ಈವರೆಗೆ ಸಂತ್ರಸ್ಥರಿಗೆ ಪ್ರತಿ ಕುಟುಂಬಕ್ಕೆ ಕೇವಲ ರೂ.95,000/= ಬಿಡುಗಡೆ ಆಗಿದೆ. ಕಟ್ಟಡ ನಿರ್ಮಾಣ ಆದ ನಂತರ ಉಳಿದ ಹಣ ಬಿಡುಗಡೆ ಮಾಡುತ್ತಾರೆ. ಸಂತ್ರಸ್ಥರು ಯಾವುದೇ ಸಮಯದಲ್ಲಿ ಭೂಕುಸಿತ ಉಂಟಾಗುವ ಭೀತಿ ಇರುವ ಹಿನ್ನೆಲೆಯಲ್ಲಿ ಎಲ್ಲಿ ಮನೆ ನಿರ್ಮಾಣ ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಸರಕಾರದ ನಿಯಮಗಳ ಅಡಿಯಲ್ಲಿ ಸಂತ್ರಸ್ಥರಿಗೆ ಶೀಘ್ರ ಉಳಿದ ಮೊತ್ತ ಬಿಡುಗಡೆ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿದ ಮರುದಿನವೇ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಳಚೆ ಪ್ರದೇಶಕ್ಕೆ ಬೆಟ್ಟಿಕೊಟ್ಟು ಪ್ರಾಕೃತಿಕ ವಿಕೋಪದ ಗಂಭೀರತೆಯನ್ನು ಅವಲೋಕಿಸಿದ್ದಾರೆ ಹಾಗೂ ರೂ.200 ಕೋಟಿಯ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈವರೆಗೆ ತೀವ್ರ ಅನಾಹುತ ಅನುಭವಿಸಿರುವ ಕಳಚೆ ಭಾಗಕ್ಕೆ ಈವರೆಗೆ ಬಂದಿರುವ ಪರಿಹಾರದ ಮೊತ್ತ ಕೇವಲ ರೂ.2 ಕೋಟಿ ಮಾತ್ರ. ಭೂಕುಸಿತದಲ್ಲಿ ನಷ್ಟವಾದ 12 ಕಾಲುಸಂಕಗಳು, 13 ಬಾಂಧಾರಗಳು, ಮುಂತಾದವುಗಳ ಪುನರ್ನಿರ್ಮಾಣ ಆಗದೆ ಇರುವುದರಿಂದ ಸಂತ್ರಸ್ಥರಿಗೆ ಕುಡಿಯುವ ನೀರಿನ ಬಗ್ಗೆ ಹಾಗೂ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗಿದೆ ಎನ್ನುವ ಅಂಶ ವ್ಯಕ್ತವಾಯಿತು. ಭೂಕುಸಿತದಿಂದ ತೊಂದರೆಗೆ ಒಳಗಾದರೂ ಪ್ರಸ್ತುತ ಅನಿವಾರ್ಯವಾಗಿ ಅದೇ ಸ್ಥಳದಲ್ಲಿ ಮುಂದುವರಿಯುತ್ತಿರುವವರಿಗೆ ಕುಡಿಯುವ ನೀರು, ಕಾಲುಸಂಕ, ಬಾಂಧಾರ, ರಸ್ತೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಒಮ್ಮತದ ಮನವಿ ವ್ಯಕ್ತವಾಯಿತು.
ಕಳಚೆಯಲ್ಲಿ ಸ್ಥಳದಲ್ಲೇ ಮುಂದುವರಿಯಬೇಕು ಎನ್ನುವ ಕೆಲವರ ಹಾಗೂ ಸಂಪೂರ್ಣ ಬೇರೆ ಸ್ಥಳಕ್ಕೆ ವಲಸೆ ಹೋಗಬೇಕು ಎನ್ನುವ ಹಲವರ ಎರಡು ಬಣಗಳು ಇರುವುದರಿಂದ ಪರಿಹಾರ ಕಾರ್ಯ ನಡರಸುವುದು ಕಷ್ಟವಾಗಿದೆ ಎಂಬ ಗೊಂದಲ ಉಂಡುಮಾಡುವ ಚಿತ್ರಣ ಸಾರ್ವಜನಿಕವಾಗಿ ಇದೆ. ಆದರೆ ಈಗಾಗಲೇ 80%ಗಿಂತ ಹೆಚ್ಚಿನವರು ಪರಿಹಾರ ಪಡೆದು ಬೇರೆಡೆಗೆ ಹೋಗಲು ಸಿದ್ಧರಿದ್ದಾರೆ. ಉಳಿದವರು, ಬಹುಸಂಖ್ಯಾತರ ಅಭಿಪ್ರಾಯಕ್ಕೆ ನಾವೂ ಬದ್ಧ; ಜಮೀನು, ತೋಟ, ಮನೆಗಳಿಗೆ ಸೂಕ್ತ ಪರಿಹಾರ ದೊರಕಿದರೆ ತಾವೆಲ್ಲರೂ ಈ ಗ್ರಾಮವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಿದ್ಧ ಎಂದು ಹೇಳಿದರು.
ಸಂತ್ರಸ್ಥರು ತಮ್ಮ ಆದಾಯದ ಮೂಲವಾದ ಜಮೀನುಗಳನ್ನು ಕಳೆದುಕೊಂಡಿರುವುದರಿAದ ಅವರು ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿAದ ಪಡೆದ ಸಾಲಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಮನ್ನಾ ಮಾಡಿಸಲೇ ಬೇಕಾದದ್ದು ಅತ್ಯಗತ್ಯ. ಸ್ಥಾನಿಕ ಸಹಕಾರಿ ಸಂಘದಿAದ ಒಟ್ಟೂ ರೂ.16.17 ಕೋಟಿ ಸಾಲ ವಿತರಣೆ ಆಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಾಲ್ಲೂಕಾ ಮಾರ್ಕೆಟಿಂಗ್ ಸೊಸೈಟಿ, ಪಿ.ರಲ್.ಡಿ.ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲದ ವಿವರಗಳನ್ನು ಪಡೆದು ಈ ಬಗ್ಗೆ ಸರಕಾರದಿಂದ ಸಾಲಮನ್ನಾ ಸೌಲಭ್ಯದ ನೆರವನ್ನು ಕೋರಲು ನಿರ್ಣಯಿಸಲಾಯಿತು.
ಮುಖ್ಯ ಮಂತ್ರಿಗಳವರು ಕಳೆದ 2021ರ ಜುಲೈ 29ರಂದು ಕಳಚೆಯ ಸಂತ್ರಸ್ಥರ ಪುನರ್ವಸತಿಯ ಬಗ್ಗೆ ಘೋಷಿಸಿದ್ದ 15 ಎಕರೆ ಭೂಮಿಯನ್ನು ಶೀಘ್ರ ಒದಗಿಸಬೇಕು ಎನ್ನುವ ಬೇಡಿಕೆ ವ್ಯಕ್ತವಾಯಿತು.

ಸಭೆಯ ವಿವರಗಳು:
ಕಾರ್ಯಕ್ರಮವನ್ನು ಆರ್ ಪಿ ಹೆಗಡೆ ನಿರ್ವಹಿಸಿದರು. ಗಜಾನನ ಭಟ್ ಸ್ವಾಗತಿಸಿದರು. ಪಂಚಾಯತ ಸದಸ್ಯರು ಪ್ರಾಸ್ತಾವಿಕ: ಶ್ರೀ ವೆಂಕಟ್ರಮಣ ಭಟ್ ಬೆಳ್ಳಿ: ಹರ ಮುನಿದರೆ, ಗುರು ಕಾಯ್ವನು ಎಂಬAತೆ ಕಳಚೆಯ ಸಂತ್ರಸ್ಥರಿಗೆ ಶೀಘ್ರ ಪರಿಹಾರ ಒದಗಿಸಲು ಪ.ಪೂ. ಗುರುಗಳವರು ಸಭಾಧ್ಯಕ್ಷರಿಗೆ ಸೂಚನೆ ನೀಡಿ ಅವರು ಮುಖ್ಯಮಂತ್ರಿಗಳವರೊಡನೆ ಚರ್ಚಿಸಿದ್ದಾರೆ. ಈವರೆಗೆ ನಮ್ಮೊಡನೆ ಸದಾ ಅಭಯ ಹಸ್ತ ತೋರಿ ನೆರವಿಗೆ ನಿಂತಿರುವುದು ನಮ್ಮ ಮಠ.ಕೆಲವು ಜನರ ಸಾಲವನ್ನು ಜಮೀನು ಹರಾಜು ಮಾಡಿದರೂ ಸಾಲ ತೀರಿಸಲು ಸಾಧ್ಯವಿಲ್ಲದ ಸ್ಥಿತಿ; ಯಾಕೆಂದರೆ ಈ ಶಾಪಗ್ರಸ್ಥ ಜಮೀನುಗಳನ್ನು ಖರೀದಿಸಲು ಯಾರೂ ಸಿದ್ಧರಿಲ್ಲ, ದಾನವಾಗಿ ಸ್ವೀಕರಿಸಲೂ ಯಾರೂ ತಯಾರಿಲ್ಲ.ಕೇಂದ್ರ ಸಚಿವ ಸುರೇಶ ಪ್ರಭು ಅವರನ್ನು ಈ ಭಾಗಕ್ಕೆ ಕರೆಸಿ, ತಳಕೆಬೈಲ ಗಣಿಗಾರಿಕೆಯನ್ನು ನಿಲ್ಲಿಸಲು ಕಾರಣರಾದ ಅನಂತ ಹೆಗಡೆಯವರ ಪ್ರಯತ್ನ ಸ್ಮರಣಾರ್ಹ.ನಿಯೋಗದ ಅನಂತ ಹೆಗಡೆ ಅಶೀಸರ ಮಾತನಾಡಿ ಭೂಕುಸಿತ ಆದಾಗ ಮಾಧ್ಯಮದಲ್ಲಿ ಸುದ್ದಿ ಆಯಿತು. ಆದರೆ ಕ್ರಮೇಣ ಈ ವಿಷಯ ತನ್ನ ಮಹತ್ವ ಕಳೆದುಕೊಂಡಿತು. ಪೂಜ್ಯ ಸ್ವರ್ಣವಲ್ಲೀ ಶ್ರೀಗಳವರು ಕಳಚೆಯವರಿಗೆ ದುರಂತ ನಡೆದು ಒಂದು ವರ್ಷವೇ ಕಳೆದರೂ ಈವರೆಗೂ ಪರಿಹಾರ ದೊರಕದಿರುವುದು ತುಂಬಾ ಖೇದದ ಸಂಗತಿ ಎಂದು ನೋವನ್ನು ವ್ಯಕ್ತಪಡಿಸಿದರು. ಅಲ್ಲದೇ, ಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ದೂರವಾಣಿಯ ಮೂಲಕ ಈ ಕುರಿತು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಪರಿಹಾರ ಒದಗಿಸುವುದು ಶ್ರೀಮಠದ ಜವಾಬ್ದಾರಿ ಎನ್ನುವ ಭಾವನೆ ಬಿಟ್ಟು ನಮಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರ ಪಡೆದುಕೊಳ್ಳಲು ಸಂಘಟಿತ ಪ್ರಯತ್ನದ ಅವಶ್ಯಕತೆಯನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಠದಚಾಧ್ಯಕ್ಷರಾದ ವಿಘ್ನೇಶ್ವರ ಹೆಗಡೆ ಬೊಮ್ಮನಹಳ್ಳಿ ಅವರು ತಪೋನಿಷ್ಠರಾಗಿ, ಶಿಷ್ಯ ವಾತ್ಸಲ್ಯ ಹೊಂದಿರುವ ಗುರುಗಳವರು ದೊರಕಿರುವುದು ನಮ್ಮ ಸೌಭಾಗ್ಯ. ಅವರ ಮಾರ್ಗದರ್ಶನದಲ್ಲಿ ಕಳಚೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ ಎಂದು ಹೇಳಿದರು.

ನಿಯೋಗದ ನಾರಾಯಣ ಹೆಗಡೆ ಗಡಿಕೈ ಅವರು ಸಭೆಯ ನಿರ್ಣಯಗಳನ್ನು ಓದಿದರು.
ವೆಂಕಟ್ರಮಣ ಬೆಳ್ಳಿ ಪ್ರಾಸ್ತಾವಿಕಗೈದು ಮಠದ ಮಾರ್ಗದರ್ಶನ ನಮಗೆ ಅಗತ್ಯ. ಗುರುಗಳು ತೋರಿದ ದಾರಿಯಲ್ಲಿ ಸಾಗುವುದಕ್ಕೆ ನಾವೆಲ್ಲರೂ ಸಿದ್ದರಿದ್ದೇವೆ ಎಂದರು

ಸಭೆಯಲ್ಲಿ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಉಮೇಶ ಭಾಗವತ,ದೇವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲ ಭಟ್ ಹಾಗೂ ಕಳಚೆ ಭೂ ಕುಸಿತ ಪರಿಹಾರ ಪುನರ್ವಸತಿ ಹೊರಾಟ ಸಮಿತಿ. ಕಾರ್ಯಾಧ್ಯಕ್ಷ ಗಜಾನನ ಗ ಭಟ್ಟ ಕಾರ್ಯದರ್ಶಿ ಅನಂತ ಹೆಗಡೆ ನಿರ್ದೇಶಕರು ರಾಮನಾಥ ಪ ಹೆಗಡೆ, ರಾಮಚಂದ್ರ ವಿ ಭಟ್ಟ ,ರಾಮಚಂದ್ರ ಗ ಹೆಗಡೆ, ಗಣಪತಿ ನ ಹೆಗಡೆ ,ರಾಘವೇಂದ್ರ ವೆಂ ಭಟ್ಟ ,ಕಾಶಿನಾಥ ಬಾಬು ಕಳಸ, ವಿಶ್ವೇಶ್ವರ ವೆಂ ಭಟ್ಟ ,ಜನಾರ್ಧನ ಸು ಹೆಬ್ಬಾರ,ಹಾಗೂ ಇತರರು ಉಪಸ್ಥಿತರಿದ್ದರು.

error: