April 10, 2025

Bhavana Tv

Its Your Channel

ರಾಘವೇಂದ್ರ ಹೆಗಡೆಗೆ ಸನ್ಮಾನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಹುಬ್ಬಳ್ಳಿ ವಿದ್ಯುತ ಕಂಪನಿಯಲ್ಲಿ ಕಂಪನಿ ಸೆಕ್ರೆಟರಿ ಯಾಗಿ ಕೆಲಸ ನಿರ್ವಹಿಸುತ್ತಿರುವ ಕೊಟೆಮನೆಯ ರಾಘವೇಂದ್ರ ಹೆಗಡೆಯವರನ್ನು ಮೆಣಸುಪಾಲನಲ್ಲಿ ಅವರ ಕಾರ್ಯ ಕ್ಷಮತೆಯನ್ನು ಮೆಚ್ಚಿ ಸನ್ಮಾನಿಸಲಾಯಿತು. ಅತ್ಯಂತ ಸಣ್ಣ ವಯಸ್ಸಿನಲ್ಲೇ ಈ ಹುದ್ದೆಯನ್ನು ಅಲಂಕರಿಸಿದ ಪ್ರತಿಭಾನ್ವಿತರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ನನ್ನ ಹುಟ್ಟಿದ ಊರಿನಲ್ಲಿ ದೊರೆಯುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ. ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿ ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸುತ್ತದೆಯೆಂದರು. ಎನ್.ಕೆ.ಭಟ್ಟ ಮೆಣಸುಪಾಲ ಮಾತನಾಡಿ ಸರಳ ಸಜ್ಜನಿಕೆಯ ಇವರ ವ್ಯಕ್ತಿತ್ವ ಎಲ್ಲರೂ ಮೇಚ್ಚುಗೆಗೆ ಪಾತ್ರರಾಗಿ ಹುಬ್ಬಳ್ಳಿ ವಿದ್ಯುತ ಕಂಪನಿಯಲ್ಲಿ ಹೆಸರುಗಳಿಸಿದ್ದಾರೆ.ಕಂಪನಿಯು ಸಹ ಉನ್ನತಿಯಾಗುತ್ತದೆ.ಈ ಸಂದರ್ಭದಲ್ಲಿ ಕೃಷಿಕ ಬಿ.ಜಿ.ಹೆಗಡೆ ಗೇರಾಳ, ಡಾ.ಎಸ್.ಆರ್.ಹಿರೇಮಠ, ಜ್ಯೋತಿಷಿ ಪ.ಗ.ಭಟ್ಟ,ಡಾ. ಅಶ್ವಿನಿ ಕುಮಾರ್,ಕೆ.ಟಿ.ಹೆಗಡೆ,ವಕೀಲರಾದ ಕೃಷ್ಣ ಭಟ್ಟ ಕೊರಗಿ ಮುಂತಾದವರು ಉಪಸ್ಥಿತರಿದ್ದರು.ಈ ವೇಳೆ ಎಸ್.ಎಸ್.ಎಲ್.ಸಿಯಲ್ಲಿ 97%ಗಿಂತಹೆಚ್ಚಿನ ಅಂಕ ಗಳಿಸಿದ ಕುಮಾರಿ ಅಂಕಿತಾ ಮರಾಠೆ ಡೊಮಗೆರೆ ಇವಳನ್ನು ಅಭಿನಂದಿಸಿ ಸತ್ಕರಿಸಲಾಯಿತು.

error: