May 3, 2024

Bhavana Tv

Its Your Channel

ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ” ಇಂದಿನ ದಿನಗಳಲ್ಲಿ ಮಹಿಳೆಯರನ್ನು ಹಾಗೂ ಮಕ್ಕಳನ್ನು ಅಪಹರಿಸಿ ಅನೈತಿಕ ಚಟುವಟಿಕೆಗಳಿಗೆ ತೊಡಗಿಸುವುದು ಹೆಚ್ಚಾಗಿದೆ. ಈ ಕಾರಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕಾನೂನು ನೆರವು ಸಮಿತಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಹಮ್ಮಿಕೊಂಡಿದೆ” ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾದೀಶ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ’ ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬನಿಗೂ ದಿನಬಳಕೆಯ ಚಟುವಟಿಕೆಗಳ ಕುರಿತು ಕಾನೂನಿನ ಜ್ಞಾನ ಸ್ವಲ್ಪವಾದರೂ ಇರಬೇಕು ಎನ್ನುವ ನಿಟ್ಟಿನಲ್ಲಿ ಕಾನೂನು ನೆರವು ಸಮಿತಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಎಂದರು.
ಸಿವಿಲ್ ನ್ಯಾಯಾದೀಶೆ ಲಕ್ಷ್ಮೀಬಾಯಿ ಪಟೀಲ್ ವೇದಿಕೆಯಲ್ಲಿದ್ದರು. ಹಿರಿಯ ವಕೀಲ ಎನ್.ಟಿ.ಗಾಂವ್ಕರ ಮಾನವ ಕಳ್ಳಸಾಗಾಣಿಕೆ ತಡೆ ಕುರಿತು ಉಪನ್ಯಾಸ ನೀಡಿದರು.
ಸಂಜೀವಕುಮಾರ ಹೊಸ್ಕೇರಿ ಪ್ರತಿಜ್ಞಾ ವಿಧಿ ಬೋಧಿಸಿದರು.ಸಿಡಿಪಿಓ ರಫಿಕಾ ಹಳ್ಳೂರು, ಪಿಐ ಸುರೇಶ ಯಳ್ಳೂರು, ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ಟ. ಕಿಚ್ಚುಪಾಲ ಮಾತನಾಡಿದರು. ಉಪನ್ಯಾಸಕ ಬೊಮ್ಮಯ್ಯ ಗೌಡ ಸ್ವಾಗತಿಸಿ ನಿರೂಪಿಸಿದರು, ಶ್ರೀಪಾದ ಹೆಗಡೆ ಚಿಕ್ಕೋತಿ ವಂದಿಸಿದರು.

error: