May 16, 2024

Bhavana Tv

Its Your Channel

ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಇಡಗುಂದಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಬಾಲಕರ ವಿಭಾಗದಲ್ಲಿ ವಿನಯ ನಾಯ್ಕ ಚೆಸ್ ನಲ್ಲಿ ಪ್ರಥಮ,ಶುಭಂ ಸುರೇಶ ರಾಯ್ಕರ್ ಗುಂಡು ಎಸೆತ,ಚಕ್ರ ಎಸೆತ ಮತ್ತು 100 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ ಹಾಗೂ ಪ್ರವೀಣ ಸಿದ್ದಿ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ,ಋತ್ವಿಕ್ ಅರವಿಂದ ಹೆಬ್ಬಾರ್ 5 ಕಿ.ಮೀ. ನಡಿಗೆಯಲ್ಲಿ ದ್ವಿತೀಯ ಸ್ಥಾನ ,ಬಾಲಕರ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ನಾಗವೇಣಿ ಸಿದ್ದಿ 3 ಕಿ.ಮೀ. ನಡಿಗೆಯಲ್ಲಿ ಪ್ರಥಮ,ಸುಪ್ರಿಯಾ ಸಿದ್ದಿ 200 ಮೀಟರ್ ಓಟದಲ್ಲಿ ಪ್ರಥಮ,ನೇತ್ರಾವತಿ ಗೌಡ 800 ಮೀಟರ್ ಓಟದಲ್ಲಿ ದ್ವಿತೀಯ, ದೀಪಾ ಪಟಗಾರ ಚೆಸ್ ನಲ್ಲಿ ದ್ವಿತೀಯ,ಬಾಲಕಿಯರ 4್ಠ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕಾ ಮಟ್ಟಕ್ಕೆ ಅರ್ಹತೆ ಗಿಟ್ಟಿಸಿದ್ದಾರೆ.
ಅಲ್ಲದೇ ಬಾಲಕರ 1500 ಮೀಟರ್ ಓಟದಲ್ಲಿ ನಿತೇಶ ಭಟ್ಟ ತೃತೀಯ,200 ಮೀಟರ್ ಓಟದಲ್ಲಿ ರಾಮಚಂದ್ರ ಸಿದ್ದಿ ತೃತೀಯ,800 ಮೀಟರ್ ಓಟದಲ್ಲಿ ದರ್ಶನ ಸಿದ್ದಿ ತೃತೀಯ, ಬಾಲಕಿಯರ ವಿಭಾಗದ 800 ಮೀಟರ್ ಓಟದಲ್ಲಿ ನಾಗವೇಣಿ ಸಿದ್ದಿ ತೃತೀಯ ಸ್ಥಾನಗಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಯನ್ನು ಮುಖ್ಯಾಧ್ಯಾಪಕರು,ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

error: