May 19, 2024

Bhavana Tv

Its Your Channel

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಸಹಾಯ ನೀಡಿ-ಬುಚ್ಚಣ್ಣ ಯಾಮಕೆ.

ಯಲ್ಲಾಪುರ: ತಮ್ಮ ಸಹೋದರನ ಮಗನಿ ಕಿಡ್ನಿ ವೈಪಲ್ಯದಿಂದ ಬಳಲುತ್ರಿದ್ದು,ಕಿಡ್ನಿ ಕಸಿಯ ಸಂಬ0ಧ ಜೌಷಧೋಪಚಾರ ಆಸ್ಪತ್ರೆಯ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.ಕಾರಣ ದಾನಿಗಳು ಚಿಕಿತ್ಸೆಗೆ ಹಣದ ನೆರವು ನೀಡಬೇಕು ಎಂದು ಸವಿತಾ ಸಮಾಜದ ಮುಖಂಡ ಬುಚ್ಚಣ್ಣ ಯಾಮಕೆ ಕೋರಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ,ಸಹೋದರನ ಮಗ ನಾಗರಾಜ ಯಾಮಕೆ ಎಂ.ಕಾ0 ಸ್ನಾತಕೋತ್ತರ ಪದವಿಧರನಾಗಿದ್ದಾನೆ.ಕ್ಷೌರಿಕ ವೃತ್ತಿಯಿಂದ ಜೀವನೋಪಾಯ ನಡೆಸಿಕೊಂಡು ಬರುತ್ತಿದ್ದ ಕುಟುಂಬದಲ್ಲಿ ನಾಗರಾಜನಿಗೆ ೨೦೧೪ ರಲ್ಲಿ ಕಿಡ್ನಿ ವೈಪಲ್ಯ ಕಂಡು ಬಂದು ಬಡ ಕುಟುಂಬಕ್ಕೆ ಬರಸಿಡಿಲು ಎರಗಿತು. ಆತನಿಗೆ ಅವನ ತಾಯಿ ಒಂದು ಕಿಡ್ನಿ ದಾನವಾಗಿ ನೀಡಿದ್ದಳು. ೨೦೧೫ ರಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪುನ; ಕಿಡ್ನಿ ವೈಪಲ್ಯದಿಂದ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದ. ದಾನಿಯೊಬ್ಬರು ದಾನವಾಗಿ ನಿಡಿದ ಕಿಡ್ನಿಯನ್ನು ಕಳೆದ ಡಿ.೧೬ರಂದು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೆ ೭ ಲಕ್ಷರೂ ತಗುಲಿದ್ದು, ಜೌಷದೋಪಚಾರಕ್ಕೆ ಪ್ರತಿ ತಿಂಗಳು ೧೦ ಸಾವಿರ ರೂ ತಗುಲುತ್ತಿದೆ. ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿಲ್ಲ. ಆಸ್ಪತ್ರೆಯವರು ೧೫ ದಿನಗಳಲ್ಲಿ ಖರ್ಚು ಭರಿಸಲು ತಿಳಿಸಿದ್ದಾರೆ. ಕಾರಣ ದಾನಿಗಳು ಕರ್ನಾಟಕ ಬ್ಯಾಂಕ ಎಸ್.ಬಿ ನಂ 8522500100009001 ಐಎಫ್ ಸಿ ಕೋಡ್ ಕೆಎಆರ್ ಬಿಂ000852 ನೇದಕ್ಕೆ ನೆರವು ನೀಡಲು ಕೋರಿದ್ದಾರೆ.

error: