May 19, 2024

Bhavana Tv

Its Your Channel

ಚುನಾವಣೆಯ ಕಾಲಕ್ಕೆ ಪರಸ್ಪರ ಸ್ಪರ್ಧಿಗಳಾಗಿದ್ದರೂ, ಇನ್ನೂ ಸ್ನೇಹಿತರಾಗಿಯೇ ಇದ್ದೇವೆ

ಯಲ್ಲಾಪುರ; ಚುನಾವಣೆಯ ಕಾಲಕ್ಕೆ ಪರಸ್ಪರ ಸ್ಪರ್ಧಿಗಳಾಗಿದ್ದರೂ, ಇನ್ನೂ ಸ್ನೇಹಿತರಾಗಿಯೇ ಇದ್ದೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಾಂಸ್ಕೃತಿಕ ಹರಿಕಾರ ಪ್ರಮೋದ ಹೆಗಡೆ ಅಭಿನಂಧನಾ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ನಾವಿಬ್ಬರೂ ಸಂಘರ್ಷ ಮಾಡಿಕೊಳ್ಳದೇ ಉತ್ತಮ ಸಂಬ0ಧ ಹೊಂದಿದ್ದೇವೆ. ರಾಜಕಾರಣದಲ್ಲಿ ಸಿಗಬೇಕಾದ ಮಾನ ಮನ್ನಣೆ ಸಿಗಲಿಲ್ಲ ಎಂಬ ಕೊರಗು ಇದ್ದೇ ಇದೆ. ರಾಜಕಾರಣದಲ್ಲಿ ಯೋಗ,ಯೋಗ್ಯತೆ ಎಲ್ಲರಿಗೂ ಸಿಗುವುದಿಲ್ಲ.ಗೆದ್ದವರಿಗೆಲ್ಲಾ ಯೋಗ್ಯತೆ ಇರಬೇಕೇನಿಲ್ಲ. ಸೋತವರಿಗೆ ಯೋಗ್ಯತೆ ಇಲ್ಲ ಎಂದಲ್ಲ. ಸೋತರೂ ಪ್ರಮೋದ ಸಂಕಲ್ಪದ ಮೂಲಕ ಜನತೆಯ ಮಧ್ಯೆ ಇದ್ದಾರೆನ್ನುವುದು ವಿಶೇಷ.
ಮಾಜಿ ಸಚಿವ ಎಚ್.ಕೆ.ಪಾಟೀಲ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ,” ಪ್ರಮೋದ ಅವರು ಹೆಗಡೆ ಅವರ ಒಡನಾಡಿಗಳು. ಹೊಸ ಆಲೋಚನೆಗಳು ಅವರನ್ನು ದೊಡ್ಡಮಟ್ಟಕ್ಕೆ ಬೆಳಸಿದೆ. ಅಧಿಕಾರ ಹೆಗೆ ಗಿಟ್ಟಿಸಿ
ಕೊಳ್ಳಬೇಕುವೆಂಬುದನ್ನು ಬಿಟ್ಟು ಉಳಿದೆಲ್ಲ ರಾಜಕೀಯ ನಡೆ ಅರಿತಿದ್ದರು ” ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, “ಪ್ರಮೋದ ಎಪ್ಪತ್ತರ ನಡುವೆಯೂ ಜನಪರವಾಗಿ ಜನರ ನಡುವೆ ಇದ್ದಾರೆ. ಅವರ ಉತ್ಸಾಹ, ಕ್ರಿಯಾಶೀಲತೆ ಅವರ ತುಂಬು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಸಮಾಜಕ್ಕೆ ಪೂರಕವಾಗಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮ ಸಾಕ್ಷಿ” ಎಂದರು.
ವಿಧಾನ ಪರಿಷತ್ ಸಭಾನಾಯಕ ಬಸವರಾಜ ಹೊರಟ್ಟಿ ಮಾತನಾಡಿ,” ಹೆಗಡೆ ಅವರ ಮಾದರೀಯ ವ್ಯಕ್ತಿತ್ವದ ಪ್ರಮೋದ ರಾಜಕಾರಣದಲ್ಲಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡಿದ್ದಾರೆ.ಅಧಿಕಾರ ಇಲ್ಲದಿದ್ದರೂ,ಅವರ ಅಭಿಮಾನಿಗಳಿಗೆ ಕೊರತೆ ಇಲ್ಲ” ಎಂದರು.
ಎA.ಎಲ್ಸಿ ಶಾಂತಾರಾಮ ಸಿದ್ದಿ,ಶಾಸಕ ದಿನಕರ ಶೆಟ್ಟಿ,ಮಾಜಿ ಶಾಸಕ ವಿ.ಎಸ್.ಪಾಟೀಲ್,ಇದ್ದರು. ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಪ್ರಮೋದ ಹೆಗಡೆ ಕುರಿತು ಅಭಿನಂದನಾ ಮಾತನಾಡಿದರು. ಕಾರ್ಯದರ್ಶಿ ಎಸ್.ಪಿ.ಶೆಟ್ಟಿ ಸ್ವಾಗತಿಸಿದರು. ಸಮೀತಿಯ ಅಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ಪ್ರಸ್ತಾಪಿಸಿದರು. ಸಮೀತಿಯ ಪ್ರಮುಖರಾದ ಡಿ.ಶಂಕರ ಭಟ್, ಕಶ್ಯಪ ಪರ್ಣಕುಟಿ,ಸದಾನಂದ ಭಟ್,ಸಿ.ಜಿ.ಹೆಗಡೆ,ಪ್ರಸಾದ ಹೆಗಡೆ,ಪ್ರಶಾಂತ ಹೆಗಡೆ,
ನಾಗರಾಜ ಹೆಗಡೆ ಕವಲಕ್ಕಿ ನಿರೂಪಿಸಿದರು.ಪ್ರಮೋದ ಅಭಿನಂದಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಅಭಿಮಾನಿಗಳು ಹಾಜರಿದ್ದರು.

error: