
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾದ(ರಿ)ಇವರ ಆಶ್ರಯದಲ್ಲಿ ಜನವರಿ.22 ರಂದು ರವಿವಾರ ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ “ಪ್ರತಿಬಿಂಬ” ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಮಹಾಸಭಾದ ಗೌರವ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಹೇಳಿದರು.
ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡುತ್ತಿದ್ದರು. ಅಂದು ಬೆಳಿಗ್ಗೆ 9.30ರಂದು ಹವ್ಯಕ ಪ್ರತಿಭೆಗಳಿಗಾಗಿ ಶ್ಲೋಕ ಪಠಣ,ಬಣ್ಣ ತುಂಬುವುದು,ಛದ್ಮವೇಷ, ಪ್ರಬoಧ, ರoಗೋಲಿ,ಮಾಲೆ ಕಟ್ಟುವುದು, ಆಶುಭಾಷಣ,ಕೇಶಾಲಂಕಾರ,ಸಾoಪ್ರದಾಯಿಕ ಹಾಡು ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ವನ್ನು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ.ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ,ವಿಶ್ವದರ್ಶನ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್,ಉಮಚಗಿ ಸೊಸೈಟಿ ಅಧ್ಯಕ್ಷ ಎಂಜಿ ಭಟ್ ಸಂಕದಗುAಡಿ,ಪ್ರಾAಶುಪಾಲ ಡಾ.ಡಿ.ಕೆ.ಗಾಂವ್ಕಾರ ಭಾಗವಹಿಸಲಿದ್ದಾರೆ.
ಈಬಾರಿ 2.50 ಲಕ್ಷಕ್ಕೂ ಹೆಚ್ಚು ಮೊತ್ತದ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ ಎಂದು ಹೇಳಿದರು.
ಮಹಾಸಭಾದ ನಿರ್ಧೆಶಕರಾದ ಗೋಪಾಲಕೃಷ್ಣ ಭಟ ಹಂಡ್ರಮನೆ,ಪ್ರಶಾoತ ಪ್ರಮೋದ ಹೆಗಡೆ,ಶಕ್ತಿ ಗಣಪತಿ ದೇವಸ್ಥಾನ ಅಧ್ಯಕ್ಷ ಅನಂತ ಗಾಂವ್ಕಾರ ಕಂಚಿಪಾಲ ಉಪಸ್ಥಿತರಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ