May 4, 2024

Bhavana Tv

Its Your Channel

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ವಿದ್ಯಾರ್ಥಿಗಳು ಮುಂದಿನ ಉತ್ತಮ ಪ್ರಜೆಯಾಗಲು ಓದಿನ ಸಂದರ್ಭದಲ್ಲಿ ಶಿಸ್ತು,ಪ್ರಾಮಾಣಿಕತೆ, ಸಂಸ್ಕಾರ ಇಂತಹ ಉತ್ತಮ ಸಂಗತಿಗ¼ನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಸಹಕಾರಿ ಟಿ.ಎಂ.ಎಸ್ ಅಧ್ಯಕ್ಷರಾದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಅವರು ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿರಿಯರ ಆದರ್ಶಗಳನ್ನು ಪಾಲಿಸುವುದರೊಂದಿಗೆ ನಿರುದ್ಯೋಗಿಗಳಗದೇ ಉದ್ಯೋಗವಂತರಾಗಲು ಇರುವ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮಾತನಾಡಿ ಚಿಕ್ಕವರಿರುವಾಗ ಈ ರೀತಿಯ ಶಿಬಿರದ ಮೂಲಕ ಒಳ್ಳೆಯ ವಿಚಾರಗಳನ್ನು ಅರಿತುಕೊಂಡರೆ ಮುಂದೆ ಬದುಕಿಗೆ ಪ್ರೇರಣೆಯಾಗುತ್ತದೆ.ಶಿಕ್ಷಣದ ಜೊತೆಗೆ ಒಂದಷ್ಟು ಕ್ರಿಯಾತ್ಮಕತೆ ಬೆಳೆಸಲು ಇಂತಹ ಶಿಬಿರವನ್ನು ನಡೆಯುತ್ತಿದ್ದು ಅದರ ಲಾಭವನ್ನು ಸಿಬಿರಾರ್ಥಿಗಳು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿ,ಉತ್ತಮ ಮನುಷ್ಯನಾಗಿ ಬಾಳುವುದು ಕಲಿತುಕೊಳ್ಳಬೇಕು. ಎನ್ನೆಸ್ಸೆಸ್ ಅಂತಹ ಮಾನವೀಯ ಮೌಲ್ಯದ ಬದುಕನ್ನು ಕಲಿಸಿಕೊಡುತ್ತದೆ.ಕೇವಲ ಅಂಕ ಗಳಿಕೆ ಶಿಕ್ಷಣವೊಂದೇ ಸಾಧನೆ ಅಲ್ಲ.ಮನುಷ್ಯತ್ವದ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಅಂಕಗಳನ್ನು ಪಡೆಯಬೇಕು ಎಂದು ಹೇಳಿದರು.

ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ನಾರಾಯಣ ಮೆಣಸುಮನೆ ಮಾತನಾಡಿ,ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಅನುಭವ ಬೇಕು. ಅನುಭವಗಳು ಬದುಕಿಗೆ ದಾರಿಯಾಗಬಲ್ಲವು ಎಂದರು.ನAದೊಳ್ಳಿಗ್ರಾಮ ಪಂಚಾಯತ ಉಪಾಧ್ಯಕ್ಷೆ ಮೀನಾಕ್ಷಿ ಭಟ್ಟ, ಸದಸ್ಯ ಶಿವಾನಂದ ನಾಯ್ಕ, ಸಾಮಾಜಿಕ ಕಾರ್ಯಕರ್ತ ಜನಾರ್ಧನ ಬೆಳ್ಳಿ, ಟಿ.ವಿ.ಭಾಗ್ವತ್ ನಂದೊಳ್ಳಿ,ಹರಿಶ್ಚAದ್ರ ಆಚಾರಿ, ಶಿಬಿರದ ನಿರ್ದೇಶಕರಾದ ಡಿ.ಜಿ.ತಾಪಸ್, ರಾಮಕೃಷ್ಣ ಗೌಡ ಇತರರಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: