May 19, 2024

Bhavana Tv

Its Your Channel

ವಿಜಯಪುರದಲ್ಲಿ ದೇಶ ರಕ್ಷಕ ಪಡೆ ಹಾಗೂ ಸ್ವದೇಶಿ ಜಾಗರಣ ಮಂಚ್ ಸದಸ್ಯರಿಂದ ಸಾರ್ಥಕ ಸೇವೆ,

ವಿಜಯಪೂರ ; ಕೋರೊನಾ ಅಬ್ಬರವನ್ನು ನಿಯಂತ್ರಿಸಲು ಸರಕಾರ ಲಾಕ್ ಡೌನ್ ಆದೇಶಿಸಿದೆ. ಬಡವರ ಬದುಕು ಬೀದಿಗೆ ಬಂದಾಗಿದೆ. ಮಾನವೀಯತೆಯನ್ನೆ ಈ ಕೊರೊನಾ ಮಾಯಗೊಳಿಸಿದೆ. ಆದ್ರೂ ಕೂಡಾ ಕೆಲಸಂಘಟನೆಗಳು, ಕೆಲ ಹೃದಯವಂತರು ಬಡವರ ಸಹಾಯಕ್ಕೆ ದೌಡಾಯಿಸುತ್ತಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ಸಹಾಯ ಒದಗಿಸಿ ನೆರವಾಗುತ್ತಿದ್ದಾರೆ. ಹೀಗಯೇ ಒಂದು ಯುವಕರು ಸೇರಿಕೊಂಡು ಸ್ಥಾಪಿಸಿರುವ ಪಡೆಯೊಂದು ಸದ್ದಿಲ್ಲದೆ ಸಾರ್ಥಕ ಸೇವೆಯಲ್ಲಿ ತೊಡಗಿದೆ. ಹಾಗಿದ್ದರೆ ಆ ಪಡೆ ಯಾವದು? ಆ ಯುವಕರು ಯಾರು ಅನ್ನೋ ಕುರಿತು ಇಲ್ಲಿದೆ ಡಿಟೇಲ್ಸ್.

ಕೊರೊನಾ ಎರಡನೇ ಅಲೆ ದೇಶದಲ್ಲೆ ತಲ್ಲಣ ಸೃಷ್ಟಿಸಿದೆ. ಬಡವರು ಹೈರಾಣಾಗಿದ್ದಾರೆ. ಇನ್ನೂ ಸೋಂಕಿತರ ಪಾಡಂತೂ ಕೇಳಲೇಬೇಡಿ ಎನ್ನೊ ವಾತಾವರಣ ನಿರ್ಮಾಣವಾಗಿದೆ.ಕೊರೊನಾ ಸೋಂಕಿತರ ಸಂಬAಧಿಕರೆ ಸೋಂಕಿತ ರಿಂದ ದೂರವಾಗಿ ಸಂಬAಧಗಳು ಕಡಿದು ಹೋಗಿವೆ. ಸೋಂಕಿತರಿಗೆ ಹಾಗೂ ಬಡವರಿಗೆ ಸಹಾಯ ಮಾಡಲು ಕೆಲವೊಂದಿಷ್ಟು ಹೃದಯವಂತರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿವೆ. ಹೀಗೆಯೇ ಬಸಬನಾಡು ವಿಜಯಪುರದಲ್ಲಿ ದೇಶ ರಕ್ಷಕ ಪಡೆ ಹಾಗೂ ಸ್ವದೇಶಿ ಜಾಗರಣ ಮಂಚ್ ಗಳು ಬಡವರು ಹಾಗೂ ಸೋಂಕಿತರಿಗೆ, ಸೋಂಕಿತರ ಸಹಾಯಕರಿಗೆ ಊಟೋಪಚಾರ ಸೇರಿದಂತೆ ಔಷಧಿಗಳನ್ನು ವಿತರಿಸುತ್ತಿವೆ.ಇಷ್ಟೇ ಅಲ್ಲದೇ ಕೊರೊನಾ ಸೋಂಕಿನಿAದ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ನಡೆಸುತ್ತಿವೆ. ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವಾರು ದೀರ್ಘಕಾಲದ ರೋಗಿಗಳಿಗೆ ಔಷಧಿಯನ್ನು ಅವರವರ ಮನೆ ಬಾಗಲಿಗಿ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿವೆ. ಇನ್ನೂ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಜೊತೆಗೆ ಇತರೆ ಚಿಕಿತ್ಸೆಗಾಗಿ ರಕ್ತದಾನ ಕಾರ್ಯಗಳನ್ನು ಮಾಡೋ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿವೆ.
ಈ ಸಂಘಟನೆಗಳು ಕಳೆದ ಲಾಕ್ ಡೌನ್ ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಸಂಕಷ್ಟಕ್ಕೆ ಮಿಡಿದಿದ್ದವು. ಆಗಲೂ ಸಹಾಯ ಹಸ್ತ ಚಾಚಿದ್ದವು. ಈ ಬಾರಿ ಕೊರೊನಾ ಸೋಂಕಿನಿAದ ಉಂಟಾಗಿರುವ ಸಂಕಷ್ಟಕ್ಕೆ ಈ ಬಾರಿಯೂ ಈ ಸಂಘಟನೆಗಳ ಯುವಕರು ಸ್ಪಂದಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆ ಗೆ ತಮ್ಮ ಬೈಕ್ ಮೂಲಕ ದಾಖಲಿಸುವದಲ್ಲದೇ ಅವರಿಗೆ ಊಟವನ್ನು ಕೊಡೊ ಮಹಾನ್ ಕಾರ್ಯದಲ್ಲಿ ತೊಡಗಿವೆ. ಇಲ್ಲಿಯವರೆಗೆ ೧೨ ಕ್ಕೂ ಅಧಿಕ ಕೊವಿಡ್ ಮೃತರ ಶವ ಸಂಸ್ಕಾರ, ೭೦ ಕ್ಕೂ ಹೆಚ್ಚು ಇತರೆ ಕಾಯಿಲೆಗಳಿಗೆ ಔಷಧಿಗಳನ್ನು ಉಚಿತವಾಗಿ ಮನೆಗೆ ತಲುಪಿಸಲಾಗಿದೆ ಅಲ್ಲದೇ ೧೫ ಕ್ಕೂ ಹೆಚ್ಚು ಜನರಿಗೆ ರಕ್ತದಾನದ ಮೂಲಕ ಪ್ರಾಣ ರಕ್ಷಿಸಿದ್ದಾರೆ. ಹಾಗೂ ೧೫೦೦ ಕ್ಕೂ ಹೆಚ್ಚು ಜನರಿಗೆ ಡಾ.ಗಿರಿಧರ ಕಜೆಯವರ ಆಯುರ್ವೇದ ಔಷಧಿಯನ್ನು ತಲುಪಿಸಲಾಗಿದೆ. ಇನ್ನೂ ಎರಡು ಸಂಘಟನೆಗಳಲ್ಲಿ ಸಾಕಷ್ಟು ಯುವಕರು ಕಾಯಾ ವಾಚಾ ಮನಸಾ ಎಂಬAತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟೇ ಕೊವಿಡ್ ಕೇರ್ ಸೆಂಟರ್ ಗಳಿಗೆ ಪ್ರತಿನಿತ್ಯ ಊಟಾ ವಿತರಿಸುವ ಅನ್ನದಾಸೋಹದಲ್ಲಿ ತೊಡಗಿಸಿಕೊಂಡಿದ್ದಾರೆ.ಈ ದಿನಗಳಲ್ಲಿ ತಮಗೆ ಗೊತ್ತೆ ಇಲ್ಲದ ಹಲವರ ಪ್ರಾಣ ರಕ್ಷಣೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಈ ಸಂಘಟನೆಗಳ ಯುವಕರಿಗೊಂದು ಹ್ಯಾಟ್ಸಪ್

ವರದಿ :ಬಿ ಎಸ್ ಹೊಸೂರ ವಿಜಯಪೂರ.

error: