September 17, 2024

Bhavana Tv

Its Your Channel

ವಿದ್ಯಾರ್ಥಿಗಳ ಪೋಷಕರಿಗೆ ಬಿಸಿಊಟ ರೇಷನ್ ಹಂಚಿಕೆ

ಇಂಡಿ ; ಕೊರೊನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ರೇಷನನ್ನು ವಿದ್ಯಾರ್ಥಿಗಳ ಪಾದಲಕರಿಗೆ ವಿತರಿಸಲಾಯಿತು. ಒಂದನೇಯ ತರಗತಿಯಿಂದ ಹತ್ತನೇಯ ತರಗತಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಬಿಸಿಊಟಕ್ಕೂ ಬ್ರೇಕ್ ಹಾಕಲಾಯಿತು ಈ ರಜಾ ಅವಧಿಯಲ್ಲಿ ಕೂಡಾ ಬಿಸಿಊಟ ಮುಂದುವರಿಸುವುದರಿಂದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಶಾಲೆಗೆ ಬರುವ ಭಯ ಹಿನ್ನಲೆಯಲ್ಲಿ ಮನೆಯಲ್ಲಿ ಅಡುಗೆ ತಯಾರಿಸುವಂತೆ ಅವರ ಪಾಲಕರಿಗೆ ರೇಷನ್ ವಿತರಣೆ ಮಾಡಿ ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ತಾಲೂಕ ಪಂಚಾಯತ ಅಕ್ಷರ ದಾಸೊಹ ಯೋಜನೆ ಅಡಿಯಲ್ಲಿ ಸರಕಾರದ ಆದೇಶದ ಮೇರೆಗೆ ಮಕ್ಕಳ ಪೋಷಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಎಲ್ ಕೆ ಇಂಗಳೆ ಹೇಳಿದರು.ಹಣಮಂತ ಇಂಗಳಗಿ ಶಿಕ್ಷಕರು.ಎಮ್ ಡಿ ಸೂಪನೂರ ಶಿಕ್ಷಕರು.ಜಿ ಬಿ ತಾವರಖೇಡ ಶಿಕ್ಷಕರು.ಕೆ ಎ ಜಾಗಿರದಾರ ಶಿಕ್ಷಕರು.ಎಮ್ ಎಸ್ ಹೊಸೂರ ಶಿಕ್ಷಕರು ಎಲ್ ಪಿ ಎಸ್ ಉರ್ದು ಶಾಲೆಯ ಮುಖ್ಯಗುರುಗಳಾದ ಎಂ ಎಂ ಬೇಗ .ಎಸ್ ಡಿ ಎಮ್ ಸಿ ಅಧ್ಯಕ್ಷ ಸಂಗಪ್ಪ ಮೊಟಗಿ. ಸದಸ್ಯ ಚಿದಾನಂದ ನಾವಿ. ಮಲ್ಲನಗೌಡ ಧಾನಪ್ಪಗೌಡ ಪಾಟೀಲ.ಶಿವಪ್ಪ ಮಾದರ.ಇತರರಿದ್ದರು.

error: