September 17, 2024

Bhavana Tv

Its Your Channel

ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಜಾಗ್ರತಿ ಅಭಿಯಾನ.

ಇಂಡಿ ತಾಲೂಕಿನ ನಾದ ಬಿಕೆ/ ಕೆಡಿ ಗ್ರಾಮದಲ್ಲಿ ಇಂದು ಮಹಾಮಾರಿ ಕೊರೊನಾ ವೈರಸ್ ಕುರಿತು ಗ್ರಾಮ ಪಂಚಾಯತ ಹಾಗೂ ಆರೊಗ್ಯ ಇಲಾಖೆ ವತಿಯಿಂದ ಮನೆ ಮನೆಗೆ ತೆರಳಿ ಜಾಗ್ರತಿ ಅಭಿಯಾನ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಪೈಗಂಬರ ದೇಸಾಯಿ ಮಾತನಾಡಿ ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡಿ ದೇಶವೆ ಲಾಕ್ ಡೌನ್ ಆಗಿದೆ ಹಾಗೆಯೇ ಎಲ್ಲರು ಲಾಕ್ ಡೌನ್ ಹಿನ್ನಲೆ ಹೊರಬರದೇ ಮನೆಯಲ್ಲಿಯೇ ಇರುವುದರ ಮೂಲಕ ನಮ್ಮ ದೇಶದ ಸೇವೆ ಮಾಡೊಣ ಹಾಗೂ ಸರಕಾರದ ಆದೇಶ ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು ಸಾರ್ವಜನಿಕರಿಗೆ ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಲಾಕ್ ಡೌನ್ ಹಿನ್ನಲೇ ಯಾರೂ ಹೊರಗೆ ಬರಬಾರದು 24 ಘಂಟೆ ಸೇವೆ ಮಾಡುತ್ತಿರುವ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ ಗ್ರಾಮ ಪಂಚಾಯತ ಸಿಬ್ಬಂದಿ ಆಶಾ ಕಾರ್ಯಕರ್ತೆರು ಇವರೆಲ್ಲಾ ನಮ್ಮ ರಕ್ಷಣೆ ಮತ್ತುನಮ್ಮ ಸುರಕ್ಷತೆ ಬಗ್ಗೆ ಅತೀ ಹೆಚ್ಚಿನ ಕಾಳಜಿ ವಹಿಸುತ್ತಿರುವವರಿಗೆ ಪ್ರೋತ್ಸಾಹ ನೀಡಲು ಇದು ಒಳ್ಳೆಯ ಅವಕಾಶ ನಾವೂ ನಮ್ಮ ಮನೆಯಲ್ಲಿಯೇ ಇರುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡೊಣ ನಾವೂ ಅವರಿಗೆ ಸಹಕಾರ ಕೊಡುವುದು ಮುಖ್ಯವಾಗಿದೆ ಎಂದು ಹೇಳಿದರು.ಅದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಪಿಡಿಓ ರಾಜೇಶ್ರಿ ಕಬಾಡೆ. ಗ್ರಾಮ ಪಂಚಾಯತ ಸದಸ್ಯ ಪೈಗಂಬರ್ ದೇಸಾಯಿ. ಪಂಡರಿನಾಥ ಪಾಟೀಲ.ಸೊಮಣ್ಣ ತೊಂಟಾಪೂರ. ಸತೀಶ ವಾಲಿಕಾರ.ರಾವೂಸಾಬ ಗೊಂದಳಿ.ಆರೋಗ್ಯ ಇಲಾಖೆ ಸಿ ಜಿ ಜೊಷಪ್ಪ ಮೇಡಂ.ಭಾಗ್ಯಶ್ರಿ ವಾಲಿಕಾರ ಮೇಡಂ ಮಾಂತೇಶ ಓೌರಸಂಗ .ಆಶಾ ಕಾರ್ಯಕರ್ತೆಯರಾದ ಶ್ರೀ ಮತಿ ಪಾರ್ವತಿ ಬಿರಾದಾರ. ಶ್ರೀಮತಿ ಶಂಕುತಲಾ ಮಾದರ.ಗ್ರಾಮ ಸೇವಕರು ಮತ್ತಿತ್ತರರು ಇದ್ದರು.

error: