March 30, 2023

Bhavana Tv

Its Your Channel

ಉಚಿತ ಆಹಾರ ಕಿಟ್ ವಿತರಣೆ: 50 ಕ್ಕೂ ಹೆಚ್ಚು ಬಡ ಕುಟುಂಬಗಳ ಹಸಿವಿಗೆ ನೆರವಾದ ಶಂಸುದ್ಧಿನ್ ಮಕಾನದಾರ”

ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ 50 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ದಿನಸಿ ಕಿಟಗಳನ್ನು ಸ್ವ ಖರ್ಚಿನಲ್ಲಿ ಶಂಸುದ್ದಿನ ಮಕಾನದಾರ ಅವರು ವಿತರಿಸಿದರು…

ಚಡಚಣ ಪಟ್ಟಣದ ಜನಸ್ನೇಹಿ ಪೋಲಿಸ ಠಾಣೆ ಪಿಎಸ್ಐ ಮಹಾದೇವ ಯಲಗಾರ ಅವರ ಸಮ್ಮುಖದಲ್ಲಿ ಬಡವರಿಗೆ ದಿನ ಬಳಕೆ ದಿನಸಿ ಕಿಟ್ ವಿತರಣೆ ಮಾಡಲಾಯಿತು…

ಸದಾ ಬಡವರ ಸೇವೆ ಮಾಡುತ್ತಿರುವ ಗ್ರಾಮದ ಶಂಸುದ್ಧಿನ್  ಮಕಾನದಾರ ಅವರು ಕೊರೋನಾ ಲಾಕ್ ಡೌನ್ ನಿಂದ ಗ್ರಾಮದ ಬಡವರು ಹಸಿವಿನಿಂದ ಇರಬಾರದು. ಸಾದ್ಯವಾದಷ್ಟು ಬಡವರಿಗೆ ತಿನ್ನಲು ಆಹಾರ ಕಿಟ್ ನೀಡಬೇಕೆಂಬ ಹಂಬಲದಿಂದ ಮುಂದಾಗಿ ಇಂದು ವಿತರಿಸಿದರು...

ಇಲ್ಲಿವರೆಗೂ ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ನಮ್ಮಂತಹ ಬಡವರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಆದರೆ ಶಂಸುದ್ಧಿನ್ ಮಕಾನದಾರ ಅವರು ತಾವು ಬಡವರಾದ್ರೂ ನಮ್ಮಗಳ ಹಸಿವಿಗೆ ನೆರವಾಗಿದ್ದಾರೆ ಎಂದು ದಿನಸಿ ಸ್ವಿಕರಿಸಿ ಬಡವರು ಕೊಂಡಾಡಿದರು…

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸದಾಶಿವ ಸಿಂಗೆ, ಬರಗಲಿ, ಚಿಕ್ಕಯ್ಯ ಹೊಕಳೆ, ಜುಬೇದಾ ಮಕಾನದಾರ, ಬಾಬು ಚಾಂದಕಾ, ಆದಮ್ ಗುಳೆಕೆದಾರ, ಭಾಷಾಸಾಬ ಬೋರಗಿ, ನೀಲು ಭಂಢರಕವಟೆ, ಪೋಲಿಸ ಕಾನ್ ಸ್ಟೇಬಲ್ ಪ್ರಶಾಂತ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು...

About Post Author

error: