April 30, 2024

Bhavana Tv

Its Your Channel

ನಿರಂತರ ಮಳೆಯಿಂದಾಗಿ ರೈತರಿಗೆ ಒಂದು ಕಡೆ ಸಂತಸ, ಇನ್ನೊಂದು ಕಡೆ ದುಃಖ

ಬಾಗೇಪಲ್ಲಿ:- ಸದಾ ಬರಗಾಲದಿಂದ ಬಳಲುತ್ತಿದ್ದ ಬಾಗೇಪಲ್ಲಿ ತಾಲ್ಲೂಕು ಈ ಬಾರಿಯ ಮುಂಗಾರು ಒಂದಷ್ಟು ರೈತರಲ್ಲಿ ಆಶಾ ಭಾವನೆ ಮೂಡಿಸಿದೆ. ಹಾಗೆ ದುಃಖವು ಮೂಡಿದೆ, ಶನಿವಾರ ರಾತ್ರಿ ಸುರಿದ ನಿರಂತರ ಮಳೆ ಕೆರೆ-ಹಳ್ಳಗಳಿಗೆ ನೀರು ತುಂಬಿಸಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಆದರೆ ಹಳ್ಳ ಕೊಳ್ಳ ತುಂಬಿ ಮೆಕ್ಕೆಜೋಳ ರಾಗಿ,ಬೀನ್ಸ್, ಹಾಗೂ ನೆಲಕಡಲೆ ನೀರಿನಲ್ಲಿ ಮುಳುಗಿ ನಷ್ಟವನ್ನು ಉಂಟುಮಾಡಿದೆ.

ಬಾಗೇಪಲ್ಲಿ ತಾಲ್ಲೂಕಿನ ಜೀವ ನದಿ ಚಿತ್ರಾವತಿ ಬತ್ತಿ ಹೋಗಿ ದಶಕಗಳೇ ಕಳೆದಿದ್ದು, ನದಿ ಪ್ರದೇಶದಲ್ಲಿ ಮರಳು ದಂಧೆಯ ಗುಂಡಿಗಳಾಗಿತ್ತು. ಆದರೆ ಒಂದೇ ರಾತ್ರಿಯಲ್ಲಿ ಸುರಿದ ನಿರಂತರ ಮಳೆ ಸುರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಆದರೆ ರಾತ್ರಿ ಸುರಿದ ಧಾರಾಕರ ಮಳೆಗೆ ಜೀವಕಳೆ ಬಂದಿದ್ದು, ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ನದಿಯಲ್ಲಿ ನೀರು ಹರಿಯುವುದನ್ನು ನೋಡಲು ಸ್ಥಳಿಯ ರೈತರು ಮುಗಿಬಿದ್ದಾರೆ. ಕೆಲವು ವರ್ಷಗಳಿಂದ ನೀರೆ ಕಾಣದ ನದಿಗಳು ಒಂದೆ ಒಂದು ರಾತ್ರಿಯೊಳಗೆ ತಮ್ಮ ಅಸ್ತಿತ್ವ ಸಾಬೀತು ಪಡಿಸಿವೆ. ಒಂದು ವಾರಗಳ ಕಾಲ ಇದೇ ರೀತಿ ಹರಿದರೆ ಸಾವಿರಾರು ಅಡಿಗೆ ಕುಸಿದಿರುವ ಅಂತರ್ಜಲ ಸುಧಾರಿಸಲಿದೆ ಎಂಬ ನಿರೀಕ್ಷೆ ರೈತರದಾಗಿದೆ.

ರಾತ್ರಿಯಿಂದ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ದೈನಂದಿನ ಕೆಲಸಕಾರ್ಯಗಳಿಗೆ ಮನೆಯಿಂದ ಹೊರಬರಲು ವರುಣನ ಅಡ್ಡಿಯಾಗುತ್ತಿದ್ದಾನೆ. ತಾಲ್ಲೂಕಿನಾದ್ಯಂತ ಜಡಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಹಲವೆಡೆ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

error: