May 1, 2024

Bhavana Tv

Its Your Channel

ಮಹಿಳೆಯರು ಆರ್ಥಿಕವಾಗಿ ಸಬಲಿಕರಣ ಆಗಬೇಕು :ಬ್ಲೂಮ್ಸ್ ಕಾಲೇಜಿನ ಪ್ರಾಂಶುಪಾಲೆ ಉಮಾಶಶಿ

ಬಾಗೇಪಲ್ಲಿ: ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬಾಗೇಪಲ್ಲಿ ಬ್ಲೂಮ್ಸ್ ಕಾಲೇಜಿನ ಪ್ರಾಂಶುಪಾಲೆ ಉಮಾಶಶಿ ಅಭಿಪ್ರಾಯ ಪಟ್ಟರು.

ಬಾಗೇಪಲ್ಲಿ ಪಟ್ಟಣದ ಗೀತಾಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಚಲನಚಿತ್ರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಹೆಣ್ಣು ಅಬಲೆ ಅಲ್ಲ. ಸಬಲೆಯಾಗಬೇಕು. ಮನೆಕೆಲಸಗಳಿಗೆ ಸೀಮಿತವಾಗಿರದೇ, ಸಮಾಜದ ಆಗು-ಹೋಗುಗಳ, ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಮಹಿಳೆಯರು ಆರ್ಥಿಕವಾಗಿ ಸಬಲಿಕರಣ ಆಗಬೇಕು. ಮಕ್ಕಳಿಗೆ ಆಸ್ತಿ, ಹಣ, ಆಶ್ವರ್ಯ ಮಾಡದೇ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಶಿಕ್ಷಣ ಕ್ರಾಂತಿಯಿAದ ಸಮಾಜ ಪ್ರಗತಿ ಹೊಂದಲು ಸಾಧ್ಯ ಇದರಿಂದ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಿದರೆ, ಉಜ್ವಲ ಭವಿಷ್ಯ ಸಿಗುತ್ತದೆ. ಮಹಿಳೆಯರಿಗೆ ಸಮಾಜದಲ್ಲಿ ಉತ್ತಮವಾದ ಗೌರವ ಹಾಗೂ ಸಮಾನ ಕೆಲಸ, ಉದ್ಯೋಗ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರಭಾವತಮ್ಮ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಮೇಲ್ವಿಚಾರಕಿ ಸಾರಮ್ಮ, ಜ್ಞಾನಕ ವಿಕಾಸದ ಸಮಾಧಿಕಾರಿ ಮಂಜುಳ, ಒಕ್ಕೂಟದ ಅಧ್ಯಕ್ಷೆ ಮಮತಾ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: