May 1, 2024

Bhavana Tv

Its Your Channel

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿದ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಗ್ರಾಮೀಣ ಮಹಿಳೆಯರು ಆರ್ಥಿಕ ಬಲವರ್ಧನೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಎನ್.ಆರ್.ಎಲ್.ಎಮ್ ಯೋಜನೆ ಆಸರೆಯಾಗಿದ್ದು, ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ ಈ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಾಗೇಪಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು.

ಬಾಗೇಪಲ್ಲಿ ತಾಲೂಕಿನ ಎಲ್ಲಂಪಲ್ಲಿ ಗ್ರಾಮ ಪಂಚಾಯತಿ ಮಟ್ಟದ ಮದರ್ ತೆರೆಸಾ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ರೂ ೨೦,ಲಕ್ಷ ರೂಪಾಯಿಗಳನ್ನು ೧೨೫ ಮಹಿಳಾ ಸ್ವ ಸಹಾಯ ಮಹಿಳಾ ಗುಂಪುಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.

ಮಹಿಳೆಯರು ಉದ್ದೇಶಿತ ಚಟುವಟಿಕೆಗಳಿಗೆ ಸಾಲದ ಹಣವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ ಹಾಗೂ ಈಗ ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಇತರೆ ಮಹಿಳೆಯರಿಗೆ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕು. ಇದರಿಂದ ಸಂಘವು ಸದೃಢವಾಗಿ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಮದರ್ ತೆರೆಸಾ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಜಿ.ಪಿ.ಎಲ್.ಎಫ್ ಕಛೇರಿ ಉದ್ಘಾಟನೆ ಹಾಗೂ ಅಜೀವಿಕಾ ಎಕ್ಸ್ಪ್ರೆಸ್ ಯೋಜನೆ ಅಡಿಯಲ್ಲಿ ೮ ಲಕ್ಷ ೫೦ ಸಾವಿರ ರೂಪಾಯಿಯನ್ನು ಬಾಡಿಗೆ ವಾಹನವನ್ನು ಮಹಿಳಾ ಒಕ್ಕೂಟದ ಅಧ್ಯಕ್ಷರಿಗೆ ಕೀ ಅನ್ನು ಹಸ್ತಾಂತರ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಇಓ ಮಂಜುನಾಥ ಸ್ವಾಮಿ, ತಾಲೂಕು ಸಾಕ್ಷರತಾ ಸಂಯೋಜಕ ಶಿವಪ್ಪ, ಕೆ.ಡಿ.ಪಿ.ಸದಸ್ಯ ಅಮರನಾಥ ರೆಡ್ಡಿ, ಗ್ರಾಮ ಪಂಚಾಯತಿ ಅದ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಆದಿನಾರಾಯಣಪ್ಪ, ಎಸ್. ವಿಶ್ವನಾಥ ರೆಡ್ಡಿ, ಸರಸ್ವತಮ್ಮ, ವಿ.ವೆಂಕಟೇಶ್, ಭಾಗ್ಯಲಕ್ಷ್ಮೀ ಗಂಗುಲಮ್ಮ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: