December 22, 2024

Bhavana Tv

Its Your Channel

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ – ಡಾ. ಮಹೇಶ ಪಂಡಿತ

ಹೊನ್ನಾವರ ಮಾ. ೩೦ : ಯಾವುದೇ ರೋಗಗಳು ಬಂದ ಮೇಲೆ ಚಿಕಿತ್ಸೆ ಮಾಡಿಸಿಕೊಳ್ಳುವುದಿಕ್ಕಿಂತ ರೋಗ ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂದು ಸ್ಥಳೀಯ ಪತಂಜಲಿ ಆಸ್ಪತ್ರೆಯ ವೈದ್ಯ ಡಾ. ಮಹೇಶ ಪಂಡಿತ ಹೇಳಿದ್ದಾರೆ.
ಕೊರೊನಾದಂತಹ ಜ್ವರಗಳು ಬೇಗ ಅಂಟಿಕೊAಡು ನಿಧಾನವಾಗಿ ಹೋಗುವುದನ್ನು ಆಯುರ್ವೇದ ಶಾಸ್ತçದಲ್ಲಿ ಹೇಳಲಾಗಿದೆ. ಮಳೆಗಾಲ ಮುಗಿದಂತೆ ಆರಂಭವಾಗುವ ವೈರಾಣುರೋಗಗಳು ಪ್ರತಿವರ್ಷ ಚಳಿಗಾಲದಲ್ಲಿ ಚಿಗುರಿ ಬೇಸಿಗೆಯಲ್ಲಿ ಅಂತ್ಯವಾಗುತ್ತದೆ. ಇಂತಹ ಸಾಂಕ್ರಾಮಿಕ ರೋಗಗಳ ತಡೆಗೆ ಅನಿವಾರ್ಯವಾಗಿ ಅಲೋಪತಿ ಔಷಧಿ ಸೇವಿಸಬೇಕಾಗುತ್ತದೆ. ಅದಕ್ಕಿಂತ ಮಿಗಿಲಾಗಿ ರೋಗ ನಿರೋಧಕ ಕಷಾಯಗಳನ್ನು ಎಲ್ಲ ಕಾಲದಲ್ಲಿ ಸೇವಿಸಬಹುದಾಗಿದೆ. ಅಮೃತಬಳ್ಳಿ, ನೆಲನೆಲ್ಲಿ, ಮಜ್ಜಿಗೆ ಹುಲ್ಲು, ಕಾಳುಮೆಣಸು, ಶುಂಠಿ, ಲಿಂಬು, ಜೀರಿಗೆ, ಕಹಿಕಡ್ಡಿ ಮೊದಲಾದವುಗಳನ್ನು ಸೇರಿಸಿ ಕುದಿಸಿ ಕಷಾಯಮಾಡಿಟ್ಟುಕೊಂಡು ಮೂರು ಹೊತ್ತು ಒಂದೊAದು ಲೋಟ ಕುಡಿಯಬೇಕು. ಇವುಗಳಲ್ಲಿ ಹೆಚ್ಚಿನ ಸಸ್ಯಗಳು ಮನೆಯ ಒಳಗೆ ಮತ್ತು ಮನೆಯ ಸುತ್ತಮುತ್ತಲು ಹಳ್ಳಿಗಳಲ್ಲಿ ದೊರೆಯುತ್ತವೆ. ಪೇಟೆಯಲ್ಲಿ ಆಯುರ್ವೇದ ಔಷಧ ಅಂಗಡಿಗಳಲ್ಲಿ ಇವುಗಳ ರಸಾಯನ ಸಿಗುತ್ತದೆ. ಮೂಗು, ಗಂಟಲು ಭಾಗವನ್ನು ಈ ಕಷಾಯ ಸ್ವಚ್ಛಪಡಿಸುವುದಲ್ಲದೇ ತಗಲುವ ವೈರಸ್‌ಗಳನ್ನು ನಾಶಮಾಡುತ್ತದೆ. ಇದನ್ನು ನಿತ್ಯ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದಾಗುತ್ತದೆ. ಇವುಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಸುಮ್ಮನೆ ಮಾಸ್ಕ್ ಧರಿಸುವುದಕ್ಕಿಂತ ಇಂತಹ ಕಷಾಯಗಳನ್ನು ಮಾಡಿ. ಮಧುಮೇಹ ಇಲ್ಲದವರು ಬೆಲ್ಲ, ಕಲ್ಲುಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಿ ರುಚಿಕರವನ್ನಾಗಿ ಮಾಡಿಸಿಕೊಂಡು ಸೇರಿಸಬಹುದು. ಜೊತೆಯಲ್ಲಿ ನಿತ್ಯದ ಆಹಾರವೂ ಸಾತ್ವಿಕವಾಗಿರಬೇಕು. ತುಳಸಿ, ಕಹಿಬೇವು, ಲಿಂಬು, ಬಿಲ್ವಪತ್ರೆ, ಮೊದಲಾದವುಗಳ ತಂಬಳಿ ಸಾರುಗಳನ್ನು ಮಾಡಬಹುದು. ಭಾರತೀಯ ಮಸಾಲೆಯ ಜೀರಿಗೆ, ಶುಂಠಿ, ಸಾಸಿವೆ ಮೊದಲಾದವುಗಳನ್ನು ಬಳಸಿದ ಆಹಾರ ಸೇವಿಸಬೇಕು. ಜೊತೆಯಲ್ಲಿ ಅನುಲೋಮ-ವಿಲೋಮ ಪ್ರಾಣಾಯಾಮ ಮತ್ತು ಕಪಾಲಭಾತ್‌ಗಳನ್ನು ಮಾಡಬಹುದು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಸಹಜವಾಗಿ ಹೆಚ್ಚುತ್ತದೆ. ಸ್ನೇಹಕುಂಜದಲ್ಲಿ ಡಾ. ಕುಸುಮಾ ಸೊರಬ ಮಾರ್ಗದರ್ಶನದಲ್ಲಿ ೪೦ವರ್ಷಗಳ ಕಾಲ ಇಂತಹ ಕಷಾಯಗಳನ್ನು ವಿವಿಧ ರೋಗಿಗಳ ಮೇಲೆ ಪ್ರಯೋಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದನ್ನು ಅನುಭವದಿಂದ ಕಂಡುಕೊAಡಿದ್ದೇನೆ.
ಭಾರತೀಯ ಔಷಧ ಪದ್ಧತಿ, ಜೀವನ ವಿಧಾನ ನಿಧಾನ ಪರಿಣಾಮ ಬೀರುತ್ತದೆ. ಸರ್ಕಾರ ಎಲ್ಲರಿಗೂ ಆಸ್ಪತ್ರೆ, ಔಷಧ, ವೈದ್ಯರನ್ನು ಇಂತಹ ಸಂದರ್ಭದಲ್ಲಿ ಒದಗಿಸುವುದು ಸಾಧ್ಯವಾಗುವುದಿಲ್ಲ. ಅದರ ಬದಲು ನಾವೇ ನಮಗೆ ಹಾಗೂ ಸರ್ಕಾರಕ್ಕೆ ಭಾರವಾಗದಂತೆ ಆಯುರ್ವೆದೀಯ ಮೂಲಗಳ ಮನೆಮದ್ದು ಕಷಾಯಗಳನ್ನು ರೂಢಿ ಮಾಡಿಕೊಂಡರೆ ಮತ್ತು ಸರ್ಕಾರ ಮತ್ತು ಆರೋಗ್ಯ ಇಲಾಖೆ ಸೂಚಿಸುವ ಅಂತರವನ್ನು ಕಾಯ್ದುಕೊಂಡರೆ ಕೊರೊನಾ ವ್ಯಾಪಿಸಲಾರದು ಎಂದು ಅವರು ಹೇಳಿದ್ದಾರೆ.
…………………………..
ಡಾ. ಮಹೇಶ ಪಂಡಿತ
ಡಾ. ಕುಸುಮಾ ಸೊರಬ ಅವರ ವಿವೇಕಾನಂದ ಆರೋಗ್ಯಧಾಮದಲ್ಲಿ ಮುಖ್ಯವೈದ್ಯಾಧಿಕಾರಿಯಾಗಿ ಕೆಲಸ ಮಾಡಿ ಆರೋಗ್ಯದ ಹಲವು ಔಷಧಗಳನ್ನು ತಯಾರಿಸಿ, ರೋಗಿಗಳಿಗೆ ನೀಡಿ, ಪರಿಣಾಮಕಾರಿಯಾಗಿ ಗುಣಪಡಿಸಿದ ಡಾ. ಮಹೇಶ ಪಂಡಿತ ಈಗ ನಗರದ ಟಿ.ಎಂ.ಹೆಬ್ಬಾರ ಸ್ಮಾರಕ ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊಬೈಲ್ ನಂಬರ ೯೪೪೯೩೫೯೫೮೮.

ವಿಶೇಷ ವರದಿ : ಶ್ರೀ ಜಿ.ಯು.ಭಟ್, ಹೊನ್ನಾವರ

error: