May 19, 2024

Bhavana Tv

Its Your Channel

“ಭಾವನಾ ವಾಹಿನಿ” ವರದಿ ಫಲಶ್ರುತಿ ಪತ್ರಿಕಾ ವಿತರಕರಿಗೆ ನೆರವು ನೀಡಲು ಭರವಸೆ ನೀಡಿದ ಜನನಾಯಕರು.

ಹೊನ್ನಾವರ: ಕರೋನಾ ಸಂಕಷ್ಟದಿoದ ಪತ್ರಿಕಾ ವಿತರಕರ ಸಂಕಷ್ಟದ ಬಗ್ಗೆ ಭಾವನಾ ವಾಹಿನಿ ತನ್ನ ವೆಬ್ ಪೇಜನಲ್ಲಿ ವಿಸ್ತಿತ ವರದಿ ಪ್ರಕಟಿಸಿತ್ತು. ಇದನ್ನು ಹಾಲಿ ಮಾಜಿ ಶಾಸಕರು ಸೇರಿದಂತೆ ವಿವಧ ಜನಪ್ರತಿನಿಧಿಗಳಿಗೆ ಸಂಘಸoಸ್ಥೆ ಗಮನಕ್ಕೂ ತರುವ ಕಾರ್ಯ ಮಾಡಿತ್ತು. ವರದಿಗೆ ಸ್ಪಂದಿಸಿದ ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ದಿ.ಮೋಹನ ಶೆಟ್ಟಿ ಪ್ರತಿಷ್ಟಾನದ ಮೂಲಕ ಶನಿವಾರ ಬೆಳಿಗ್ಗೆ ದಿನಸಿ ಕಿಟ್ ನೀಡಲು ಮುಂದಾಗಿದ್ದಾರೆ. ಇದಲ್ಲದೇ ತನ್ನ ಕ್ಷೇತ್ರ ವ್ಯಾಪ್ತಿಗೆ ಬರದೇ ಇದ್ದರೂ ಸಮಾಜಮುಖಿ ಕಾರ್ಯ ಮಾಡುತ್ತಿರುವ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಶನಿವಾರ ಮಧ್ಯಾಹ್ನ ಸಹಾಯ ನೀಡುವುದಾಗಿ ಸಂಘಟನೆಯ ಗಮನಕ್ಕೆ ತಂದಿದ್ದಾರೆ. ಇದರಿಂದ ಸಂಕಷ್ಟದ ಬಗ್ಗೆ ವರದಿ ಪ್ರಕಟಿಸಿ ನೆರವಾಗುವಂತೆ ಸಹಕರಿಸಿದ ಭಾವನಾ ವಾಹಿನಿ ತಂಡಕ್ಕೆ ಪತ್ರಿಕಾ ವಿತರಕರು ಅಭಿನಂದಿಸಿದ್ದಾರೆ.

error: