April 30, 2024

Bhavana Tv

Its Your Channel

ನ. 23ರಂದು ಕಾಂಚಿಕಾ ಸನ್ನಿಧಿಯಲ್ಲಿ ಅದ್ದೂರಿ ಲಕ್ಷದೀಪೋತ್ಸವ : ಆರ್. ಜಿ. ನಾಯ್ಕ

ಕುಮಟಾ ತಾಲೂಕಿನ ಬಾಡ-ಗುಡೇ ಅಂಗಡಿಯ ಶ್ರೀ ಕಾಂಚಿಕಾAಬಾ ಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿ
ಲೋಕ ಕಲ್ಯಾಣಾರ್ಥವಾಗಿ ನವೆಂಬರ 23ರಂದು ಬುಧವಾರ ಕಾರ್ತಿಕ ಅಮವಾಸ್ಯೆಯ ಪರ್ವಕಾಲದಲ್ಲಿ
ಲಕ್ಷದೀಪೋತ್ಸವವನ್ನು ಅದ್ಧೂರಿಯಾಗಿ, ಶೃದ್ದಾ, ಭಕ್ತಿ ಪೂರ್ವಕವಾಗಿ ಆಚರಿಸಲಾಗುವುದು ಎಂದು ಲಕ್ಷದೀಪೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಆರ್. ಜಿ. ನಾಯ್ಕ ಹೇಳಿದರು.

ಬುಧವಾರ ಬಾಡ-ಗುಡೇಅಂಗಡಿಯ ಶ್ರೀ ಕಾಂಚಿಕಾAಬಾ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನಿAದಲೂ ಪರಂಪರಾಗತವಾಗಿ ಕಾರ್ತಿಕ ಮಾಸದಲ್ಲಿ ಸಣ್ಣ ಪ್ರಮಾಣದಲ್ಲಿ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಇಂತಹ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸರ್ವರ ಕಲ್ಯಾಣಕ್ಕಾಗಿ ಈ ಬಾರಿ ಅದ್ದೂರಿಯಾಗಿ ಲಕ್ಷದೀಪೋತ್ವವನ್ನು ಭಕ್ತಾಧಿಗಳ ಸಧಿಚ್ಚೆಯಂತೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿ ಹಮ್ಮಿಕೊಂಡ ಹಿರಿಮೆಗೆ ಪಾತ್ರವಾಗಲಿದೆ. ಹೀಗಾಗಿ ರಾಜ್ಯ, ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾಧಿಗಳು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕು. ಅಂದು ದೂರದೂರುಗಳಿಂದ ಬರುವ ಭಕ್ತಾಧಿಗಳಿಗೆ ಬಸ್ ಮತ್ತು ಟೆಂಪೋ ವ್ಯವಸ್ಥೆ ಮಾಡಲಾಗಿದೆ ಎಂದರು.

ದೀಪಾರಾಧನೆ ದೇವಿಗೆ ಪ್ರಿಯವಾದ ಪೂಜೆ. ತನ್ಮೂಲಕ ದೇವಿ ಸಂತುಷ್ಠಳಾಗಿ ಮೂರು ಗ್ರಾಮದ ಹೊರತಾಗಿ
ಜಿಲ್ಲೆ, ರಾಜ್ಯ,ದೇಶದ ಭಕ್ತರು ಆಯುರಾರೋಗ್ಯವಂತರಾಗಿ ಬಾಳುವಂತಾಗಬೇಕು. ಹೀಗಾಗಿ ಸಾರ್ವಜನಿಕರೂ ಸಹ
ದೀಪಾರಾಧನೆಯ ಮೂಲಕ ಕೃತಾರ್ಥರಾಗಬೇಕು. ಈ ಕಾರ್ಯಕ್ರಮಕ್ಕೆ 11 ಲಕ್ಷ ಖರ್ಚು ತಗಲುವ ಸಾಧ್ಯತೆ ಇದೆ. ಇದಕ್ಕಾಗಿ ದೀಪದ ಕೂಪನ್ ಮಾಡಲಾಗಿದೆ. 10 ರೂ, 50 ರೂ, 100 ರೂ ಹಾಗೂ 25 ದೀಪಗಳಿಗೆ 250 ರೂ, 50 ದೀಪಗಳಿಗೆ 500 ರೂ, 100 ದೀಪಗಳಿಗೆ 1000 ರೂ ಹೀಗೆ ಪ್ರತ್ಯೇಕ ಕೂಪನ್ ಗಳನ್ನು ಮಾಡಲಾಗಿದೆ, ತುಪ್ಪದ ದೀಪವೊಂದಕ್ಕೆ 50 ರೂ, ಇದರಲ್ಲಿ 500 ಮತ್ತು ಹೆಚ್ಚು ದೀಪಗಳ ಸೇವೆ ಸಲ್ಲಿಸಬಹುದಾಗಿದೆ. ಈಗಾಗಲೇ ದೇವಸ್ಥಾನದ ಆವಾರದಲ್ಲಿ ಸೇವಾ ಕೌಂಟರ್ ಗಳನ್ನು ಸ್ಥಾಪಿಸಲಾಗಿದ್ದು, ಭಕ್ತಾಧಿಗಳು ಇದರ ಪ್ರಯೋಜನ ಪಡೆದುಕೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ವಿನಂತಿಸಿದ್ದಾರೆ.

20-11-2022 ರವಿವಾರದಿಂದ 23-11-2022 ಬುಧವಾರದವರೆಗೆ ಲಕ್ಷ ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾಯ್ರಕ್ರಮಗಳು ನಡೆಯಲಿದ್ದು, 21-11-2022 ಸೋಮವಾರ ಬೆಳಿಗ್ಗೆ ನವಗ್ರಹ ಶಾಂತಿ, ದುರ್ಗಾ ಶಾಂತಿ, ಮಹಿಳೆಯರಿಂದ ಕುಂಕುಮಾರ್ಚನೆ, ಸಂಜೆ ದುರ್ಗಾ ಮೂಲ ಮಂತ್ರ ಜಪ, ಅಷ್ಟಾವಧಾನ ಸೇವೆ. 22-11-2022 ಮಂಗಳವಾರ ಬೆಳಿಗ್ಗೆ ಪಂಚ ದುರ್ಗಾಶಾಂತಿ ಹವನ, ಮಹಾಪೂರ್ಣಾಹುತಿ, ಸಂಜೆ ದುರ್ಗಾ ದೀಪ ನಮಸ್ಕಾರ. 23-11-2022ರಂದು ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ ನಡೆಯಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.

ಲಕ್ಷದೀಪೋತ್ಸವ ಸಮಿತಿಯ ಕಾರ್ಯದರ್ಶಿ ಎಸ್ ಎಸ್ ಹೆಗಡೆ, ಜಿ. ಪಂ. ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ, ತಾ. ಪಂ. ನಿಕಟಪೂರ್ವ ಸದಸ್ಯ ಜಗನ್ನಾಥ ನಾಯ್ಕ, ಹೊಲನಗದ್ದೆ ಗ್ರಾ. ಪಂ. ಸದಸ್ಯ ಎಮ್. ಎಮ್. ಹೆಗಡೆ, ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ರಾಘು ಪಟಗಾರ, ಸದಸ್ಯೆ ಅನುರಾಧಾ ಭಟ್ಟ, ಭವಾನಿ ಹೆಗಡೆ, ಮೀನುಗಾರರ ಮುಖಂಡ ಬೀರಪ್ಪ ಹರಿಕಾಂತ, ಪವನ ಗುನಗಾ, ಮೋಹನ ಹರಿಕಾಂತ, ವಿವೇಕ ಹೆಗಡೆ, ನಾಗಪ್ಪ ಅಂಬಿಗ, ಮಂಜು ಇನ್ನಿತರರು ಇದ್ದರು.

ವರದಿ;ವಿಶ್ವನಾಥ ಜಿ ನಾಯ್ಕ ಕುಮಟಾ

error: