May 16, 2024

Bhavana Tv

Its Your Channel

ಸಿಮೆಂಟ್ ಕಲ್ಲು ಸಾಗಿಸುತ್ತಿದ್ದ ಮಿನಿಲಾರಿ ಪಲ್ಟಿ

ಕಾರ್ಕಳ : ನಗರದ ಎನ್ ಆರ್ ರಸ್ತೆಯಲ್ಲಿ ಸಿಮೆಂಟ್ ಕಲ್ಲು ಸಾಗಿಸುತ್ತಿದ್ದ ಮಿನಿಲಾರಿಯೊಂದು ತಾಂತ್ರಿಕ ದೋಷಕ್ಕೊಳಗಾಗಿ ಪಲ್ಟಿ ಹೊಡೆದ ಘಟನೆ ಜೂನ್ 22ರ ಸಂಜೆ ವೇಳೆಗೆ ಸಂಭವಿಸಿದೆ.
ತೆಳ್ಳಾರು ರಸ್ತೆಯಿಂದ ಜೋಡುರಸ್ತೆ ಕಡೆಗೆ ಮಿನಿಲಾರಿ ಸಾಗಿತ್ತಿತ್ತು ಎಂದು ತಿಳಿದುಬಂದಿದೆ.
ಏಕಾಏಕಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲ್ಲೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮಿನಿ ಲಾರಿ ಕ್ಷಣ ಮಾತ್ರದಲ್ಲಿ ಮಗುಚಿ ಬಿತ್ತು.
ಮಿನಿಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಸಿಮೆಂಟ್ ಕಲ್ಲು ನಷ್ಟಕ್ಕೊಳಗಾಗಿದೆ. ಮಿನಿಲಾರಿ ಜಖಂಗೊAಡಿದ್ದು, ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿ ; ಅರುಣ ಭಟ್ ಕಾರ್ಕಳ

error: