May 1, 2024

Bhavana Tv

Its Your Channel

ಕೋವಿಡ್ ವಿಷಮ ಪರಿಸ್ಥಿಯನ್ನು ಮೀರಿ ನಿಂತ ಮಹಿಳೆಯರು ನೆನಪಾಗುತ್ತಾರೆ : ಭುವನೇಶ್ವರಿ ಹೆಗಡೆ

ಮಣಿಪಾಲ ಮಾ.೮: ಕಳೆದವರ್ಷದ ಕೋವಿಡ್ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಕಲ್ಲಿನೇಟಿಗೂ ಹೆದರದೇ ಸೇವೆ ನೀಡಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು, ಎಲ್ಲ ಸವಾಲುಗಳನ್ನು ಎದುರಿಸಿ ಮನೆ ನಿಭಾಯಿಸಿದ ಗೃಹಿಣಿಯರು, ಈ ದಿನದ ಮಹಿಳಾ ದಿನದಂದು ನೆನಪಾಗುತ್ತಾರೆ. ಈ ಕಾಲಘಟ್ಟದಲ್ಲಿ ನಮ್ಮ ಮಹಿಳೆಯರ ಗಟ್ಟಿತನ, ಹೋರಾಟ ಮನೋಭಾವ ಜಗತ್ತೇ ಬೆರಗುಗೊಳಿಸುವಂತೆ ಅನಾವರಣಗೊಂಡಿದೆ ಎಂದು ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯವರು ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ಮಹಿಳಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಪಂಚಾಯತನ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಿಳೆಯರು ತಮ್ಮ ಮನೆ ಮತ್ತು ವೃತ್ತಿ ಎರಡನ್ನೂ ನಿಭಾಯಸುವ ಜವಾಬ್ದಾರಿಯನ್ನು ಹೊಂದಿದ್ದು ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲೂ ತನ್ನ ತನವನ್ನು ಭಾರತೀಯತೆಯನ್ನು ಬಿಡಬಾರದು ಎಂದು ಕರೆಯಿತ್ತರು. ಸಮಾರಂಭದ ಮುಖ್ಯ ಅತಿಥಿಯಾಗಿ ನಬಾರ್ಡ್ ಸಂಸ್ಥೆಯ ಡಿಡಿಎಮ್ ಸಂಗೀತಾ ಕರ್ತಾ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ಅಧಿಕಾರಿ ಭಾರತಿ ಹೆಗಡೆ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ಥಾವನೆಗೈದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿವಿಟಿ ಅಧಿಕಾರಿಗಳಾದ ಪ್ರತಿಮಾ ಮತ್ತು ಶ್ರದ್ಧಾ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಹಿರಿಯ ಸಲಹೆಗಾರರಾದ ಶ್ರೀಕಾಂತ ಹೊಳ್ಳ ವಂದಿಸಿದರು
ತದನAತರ ಭಾರತೀಯ ವಿಕಾಸ  ಟ್ರಸ್ಟ್‌ನಲ್ಲಿ ತರಬೇತಿ ಪಡೆದು ಸ್ವಾವಲಂಗಳಾದ ಸಾಧಕಿಯರು ತಮ್ಮ ಯಶೋಗಾಥೆಗಳನ್ನು ಹಂಚಿಕೊoಡರು ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ಸಿಬ್ಬಂದಿಗಳು ಮತ್ತು ಹೊಲಿಗೆ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

error: