ಉಡುಪಿ:ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದಲ್ಲಿ ಹೊಲಿಗೆ ತರಬೇತಿ ಪಡೆದ ಪರ್ಕಳದ ಮಹಿಳಾ ಸ್ವ ಉದ್ಯೋಗಿ ಸನ್ನೀತಾ ರವರಿಗೆ ಹೋಮ್ ಡಾಕ್ಟರ್ಸ್ ಫೌಂಡೇಶನ್, ಉಡುಪಿ ಇವರಿಂದ ಉಚಿತ ವಾಗಿ ಕೊಡಮಾಡಿದ ಹೈ ಸ್ಪೀಡ್ ಹೊಲಿಗೆ ಯಂತ್ರವನ್ನು ಶನಿವಾರ (೧೦.೪.೨೦೨೧) ರಂದು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸನ್ನಿತಾ ಅವರು ತಯಾರಿಸಿದ ೧೦ ವಿವಿಧ ಮಾದರಿಯ ಲೇಡಿಸ್ ಹ್ಯಾಂಡ್ ಬ್ಯಾಗ್ ಗಳನ್ನು ಡಾಕ್ಟರ್ ಫೌಂಡೇಶನ್ ಮೂಲಕ ಖರೀದಿಸಲಾಯಿತು ಮತ್ತು ಇನ್ನೂ ೧೦ ಬ್ಯಾಗ ಗಳಿಗಾಗಿ ಇದೇ ಸಂಸ್ಥೆಯಿAದ ಬೇಡಿಕೆ ಬಂದಿರುತ್ತದೆ. ೨೦ ಬ್ಯಾಗಿಗೆ ಸುಮಾರು ರೂ.೬೫೦೦/- ಗಳಿಸಿರುತ್ತಾರೆ. ಈ ಸಮಾರಂಭದಲ್ಲಿ ಹೋಮ್ ಡಾಕ್ಟರ್ಸ್ ಫೌಂಡೇಶನ್ ಪದಾಧಿಕಾರಿಗಳು, ಭಾರತೀಯ ವಿಕಾಸ ಟ್ರಸ್ಟಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟ್ ಮೂಲಕ ತರಬೇತಿಯನ್ನು ಪಡೆದ ಸನ್ನೀತಾ ಅವರು ತರಬೇತಿಯ ನಂತರ ಟ್ರಸ್ಟಿಗೆ ಹಲವಾರು ಬಾರಿ ಭೇಟಿ ಮಾಡುತ್ತಿದ್ದರು. ಸ್ವ ಉದ್ಯೋಗ ಕೈಗೊಳ್ಳುವ ಬಗ್ಗೆ ಮಾಹಿತಿ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ