April 30, 2024

Bhavana Tv

Its Your Channel

ಕೋವಿಡ್ ಸ್ವಾಬ್ ಪರೀಕ್ಷಾ ಕೇಂದ್ರ ಮತ್ತು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ಸಚಿವ ನಾರಾಯಣಗೌಡ ಭೇಟಿ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಸೋಂಕಿತರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಮಾಡಿ ಆರೋಗ್ಯ ಕುಶಲೋಪರಿ ನಡೆಸಿದ ಸಚಿವ ನಾರಾಯಣ ಗೌಡ ಹಾಗೂ ಸಚಿವರಿಗೆ ಸಾಥ್ ನೀಡಿದ ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಂ.ಎಸ್.ಜಯAತ್ ….

ಜ್ವರ, ಕೆಮ್ಮು ನೆಗಡಿ ಸೇರಿದಂತೆ ಗಂಟಲುನೋವಿನಿAದ ಬಳಲುತ್ತಿರುವವರು ಕೋವಿಡ್ ಗಂಟಲುದ್ರವದ ಪರೀಕ್ಷೆ ಮಾಡಿಸಿಕೊಂಡು ಸೋಂಕು ಕಂಡು ಬಂದರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ದಾಖಲಾಗಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆದುಕೊಂಡು ಶೀಘ್ರವೇ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಬೇಕು ಎಂದು ಮನವಿ ಮಾಡಿದ ಸಚಿವರು ಕೊರೋನಾ ವಿರುದ್ಧದ ಯುದ್ಧವನ್ನು ಸೋಂಕಿತರು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಎದುರಿಸಿ ಗೆಲ್ಲಬೇಕು. ತಾಲ್ಲೂಕು ಮತ್ತು ಜಿಲ್ಲಾಡಳಿತವು ಕೋವಿಡ್ ನಿರ್ಮೂಲನೆಗೆ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ಆದ್ದರಿಂದ ಶ್ರೀಸಾಮಾನ್ಯರು ಮನೆಯಿಂದ ಹೊರಬರದೇ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರು ಕೈಮುಗಿದು ಮನವಿ ಮಾಡಿದರು..

ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ದಾಖಲಾಗಿರುವ ಸೋಂಕಿತರೊAದಿಗೆ ಮಾತನಾಡಿ ಕಷ್ಟಸುಖ ವಿಚಾರಿಸಿದ ಸಚಿವರು ಬಿಸ್ಕೆಟ್ ಪ್ಯಾಕೇಟ್ ಗಳು ಮತ್ತು ಜ್ಯೂಸ್ ಬಾಟಲ್ ಗಳನ್ನು ವಿತರಿಸಿ ಶೀಘ್ರವೇ ಗುಣಮುಖರಾಗಿ ಮನೆಗೆ ತೆರಳುವಂತೆ ಶುಭ ಹಾರೈಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: