April 27, 2024

Bhavana Tv

Its Your Channel

ಮಲೇರಿಯಾ ವಿರೋಧಿ ಮಾಸಾಚರಣೆ

ಬಾಗಲಕೋಟೆ ಜಿಲ್ಲೆಯ ಕಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಕಾಮನ್ನವರ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಯಲ್ಲವ್ವ ರವಿ ಗಾಣಿಗೇರ ಮಾನ್ಯ ಆಡಳಿತ ವೈದ್ಯಾಧಿಕಾರಿಗಳು ಡಾ|| ಗಂಗಮ್ಮ ಎಸ್ ಪಾಟೀಲ್ ಇವರುಗಳು ಜಾಥಾ ಕಾಯ೯ಕ್ರಮಕ್ಕೆ ಹಸಿರು ನೀಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು .

ಕಾಯ೯ಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ|| ಗಂಗಮ್ಮ ಎಸ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಲೇರಿಯಾ ರೋಗವು ಅನಾಪಿಲಿಸ್ ಎಂಬ ಸೊಳ್ಳೆಯ ಮೂಲಕ ಉತ್ಪತ್ತಿಯಾಗುತ್ತದೆ ಈ ಸೊಳ್ಳೆ ಮನುಷ್ಯರಿಗೆ ಕಚ್ಚುವುದರಿಂದ ಒಬ್ಬರಿಂದ ಇನ್ನೂಬ್ಬರಿಗೆ ಮಲೇರಿಯಾ ಹರಡುತ್ತದೆ ಎಂದು ತಿಳಿಸಿದರು.
ಶ್ರೀ ಶಕ್ತಿ ಸಂಘದವರಿಗೆ ಶ್ರೀ ಕಾಂಚನೇಶ್ವರಿ ದೇವಸ್ಥಾನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಕುರಿತು ಕೆ ಪಿ ಹಂಪಿಹೊಳಿ ಜಿಲ್ಲಾ ಮೇಲ್ವಿಚಾರಕರು ಹಾಗೂ ಎಮ್ ಎಸ್ ಅಂಗಡಿ ವಿಬಿಡಿ ಮೇಲ್ವಿಚಾರಕರು ಕಾರ್ಯಕ್ರಮದ ಕುರಿತು ಮಾತನಾಡಿ ಮುಂಜಾಗ್ರತೆ ಹಾಗೂ ನಿಯಂತ್ರಣ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಯವರು ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಕಾರ್ಯಕ್ರಮವನ್ನು ಬಿ ಎಸ್ ಮದ್ಲಿ ಪಿಹೆಚ್‌ಸಿ ಮೇಲ್ವಿಚಾರಕರು ನಿರ್ವಹಿಸಿದರು. ಎಸ್ ಎಸ್ ಕೊಟಗಿ ಎಚ್‌ಐಓ ಅವರು ವಂದಿಸಿದರು..

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: