April 26, 2024

Bhavana Tv

Its Your Channel

ಅಂತರ್ ಮಹಿಳಾ ಕಾಲೇಜುಗಳ ಕಬಡ್ಡಿ ಮತ್ತು ಖೋಖೋ ಪಂದ್ಯಾವಳಿಗೆ ಚಾಲನೆ

ಕ್ರೀಡೆಯನ್ನು ಆಸಕ್ತಿಯಿಂದ ಆಡಿ: ಕ್ರೀಡಾಪಟು ಎಲ್.ಜಯಂತಿ

ಕಮತಗಿ: ಕ್ರೀಡಾಪಟುಗಳಿಗೆ ಆಸಕ್ತಿ ಜೊತೆಗೆ ಸತತ ಪ್ರಯತ್ನ ಹಾಗೂ ಮನೋಸ್ಥೆöÊರ್ಯದ ಏಕಾಗ್ರತೆ ಅವಶ್ಯವಾಗಿದೆ ಎಂದು ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಲ್ ಜಯಂತಿ ಹೇಳಿದರು.

ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಹಾಗೂ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಯೋಗಿನಿದೇವಿ ಆರ್.ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ನಡೆದ ಅಂತರ ಮಹಿಳಾ ಕಾಲೇಜುಗಳ ಕಬಡ್ಡಿ ಹಾಗೂ ಖೋಖೋ ಪಂದ್ಯಾವಳಿ ಮತ್ತು ಆಯ್ಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಮಹಿಳಾ ಕ್ರೀಡಾಪಟುಗಳು ಕ್ರೀಡೆಯಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿದ್ದು, ಸತತ ಪ್ರಯತ್ನ ಹಾಗೂ ಏಕಾಗ್ರತೆಯ ಮನೋಭಾವದೊಂದಿಗೆ ಗ್ರಾಮೀಣ ಕ್ರೀಡೆಗಳು ಸೇರಿದಂತೆ ಇತರ ವಿಭಾಗಗಳಲ್ಲಿ ಸಾಧಕರಾಗಿದ್ದಾರೆ ಎಂದರು.
ಕ್ರೀಡಾಜ್ಯೋತಿಗೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸಕ್ಪಾಲ್ ಹೂವಣ್ಣ ಮಾತನಾಡಿ ಕ್ರೀಡಾಪಟುಗಳು ಸ್ಪರ್ಧಾತ್ಮಕತೆಗೆ ಒತ್ತು ನೀಡಿ ಆಸಕ್ತಿಯೊಂದಿಗೆ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಎಂದರು.
ಸಂಘದ ಅಧ್ಯಕ್ಷರಾದ ಶ್ರೀ ಹುಚ್ಚೇಶ್ವರ ಹುಚೇಶ್ವರ ಸ್ವಾಮೀಜಿ, ಕುಂದರಗಿ ಅಡವಿ ಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಕಾರ್ಯದರ್ಶಿ ಬಸವರಾಜ ಕುಮಚಗಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ನಿಖಾಯದ ಡೀನ್ ಡಾ.ರಾಜಕುಮಾರ ಮಾಲಿಪಾಟೀಲ, ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ, ಉದ್ಯಮಿಗಳಾದ ಸಾಯಿಕಿರಣ ಸರಡಗಿ, ಪ್ರವೀಣ ಹೆರೂರ, ಆಡಳಿತಾಧಿಕಾರಿ ಅನಿಲಕುಮಾರ ಕಲ್ಯಾಣಶೆಟ್ಟಿ, ಪಪಂ ಸದಸ್ಯ ದೇವಿಪ್ರಸಾದ ನಿಂಬಲಗುAದಿ, ಪಪಂ ಮಾಜಿ ಸದಸ್ಯರಾದ ಗಂಗಾಧರ ಕ್ಯಾದಿಗ್ಗೇರಿ, ಸಿದ್ದು ಹೊಸಮನಿ, ಪ್ರಾಚಾರ್ಯೆ ಡಾ.ಎಸ್.ಎಂ.ರೆಡ್ಡಿ ಉಪಸ್ಥಿತರಿದ್ದರು.

ಶಿಕ್ಷಕ ಹುಚ್ಚೇಶ ಲಾಯದಗುಂದಿ, ಗೀತಾ ಉಮಚಗಿ ನಿರೂಪಿಸಿದರು. ಬಿ.ಎಚ್.ಕಂಬಾಳಿಮಠ ಸ್ವಾಗತಿಸಿದರು. ಕೆ.ಎಂ.ಭಜAತ್ರಿ ಪರಿಚಯಿಸಿದರು. ಎ.ಎಚ್,ಮಲಘಾಣ ವಂದಿಸಿದರು.

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: