April 27, 2024

Bhavana Tv

Its Your Channel

ಚುನಾವಣೆ ನೀತಿ ಸಂಹಿತೆಯಿOದ ತಾತ್ಕಾಲಿಕ ಮುಷ್ಕರ ಮುಂದೂಡಿಕೆ : ವಿಜಯಾನಂದ ಕಾಶಪ್ಪನವರ

ಇಳಕಲ್ : ನವ್ಹಂಬರ್ ೧೨ರಂದು ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವವರೆಗೆ ಹೋರಾಟ ಮಾಡುವದನ್ನು ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಇರುವದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಹೇಳಿದರು.

ಗುರುವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಲಿಂ. ವಿಜಯಮಹಾಂತ ಶಿವಯೋಗಿಗಳ ಗ್ದುಗೆಯ ಹಿಂದುಗಡೆ ೧೨ ಎಕರೆ, ಗುರುಲಿಂಗಪ್ಪ ಪ್ಲಾಟಿನ ಆಶ್ರಯ ಬಡಾವಣೆ, ಕಂದಗಲ್ಲ ರಸ್ತೆ ಪಕ್ಕದಲ್ಲಿ ೪೨ ಎಕರೆ ಈ ಎಲ್ಲ ಆಶ್ರಯ ಫಲಾನುಭವಿಗಳಿಗೆ ತಾವು ಶಾಸಕರಾಗಿ ಮತ್ತು ಆಶ್ರಯ ಕಮೀಟಿಯ ಅಧ್ಯಕ್ಷರಾಗಿ ರಾಜೀಗಾಂಧಿ ವಸತಿನಿಗಮದಿಂದ ಒಪ್ಪಿಗೆ ಪಡೆದು ಸಾಂಕೇತಿಕವಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕು ಪತ್ರಗಳನ್ನು ವಿತರಿಸಿದ್ದು ಉಳಿದ ಹಕ್ಕು ಪತ್ರಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಶಾಸಕ ದೊಡ್ಡನಗೌಡಾ ಪಾಟೀಲ ಅವರು ಈ ನಿವೇಶನಗಳು ಕಾಂಗ್ರೆಸ್‌ದವರಿoದ ಆದದ್ದು ಎಂದು ದುರುದ್ವೇಶದಿಂದ ಮೂರು ವರ್ಷಗಳ ಕಾಲ ವಿತರಿಸದಂತೆ ಅಧಿಕಾರಿಗಳಿಗೆ ನೋಡಿಕೊಂಡರು. ಶಾಸಕರಿಗೆ ಕನಿಷ್ಠ ಅರಿವು, ಪ್ರಜ್ಞೆ, ಕಾನೂನಿನ ಜ್ಞಾನ ವಿಲ್ಲ ಠರಾವು ಪುಸ್ತಕವನ್ನು ಶಾಸಕರು ತಮ್ಮ ಮನೆಗೆ ಹೇಗೆ ತರಿಸಿಕೊಂಡರು ಎಂದು ಪ್ರಶ್ನಿಸಿ ಹಕ್ಕು ಪತ್ರವಿತರಣೆಯಲ್ಲಿ ಅಧಿಕಾರಿಗಳಿಂದ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಭ್ರಷ್ಟಾರ ನಡೆದಿದ್ದು ಸಮಗ್ರ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ಜಿಲ್ಲಾಧಿಕಾರಿಗಳು ಹಕ್ಕು ಪತ್ರಗಳನ್ನು ಕಳಿಸಿದ್ದನ್ನು ಲಿಖಿತ ಹೇಳಿಕೆಯ ಮೂಲಕ ಕೊಟ್ಟಿದ್ದು ಹಕ್ಕು ಪತ್ರಗಳು ಎಲ್ಲಿವೆ ಎಂದು ನಗರಸಭೆಯವರಿಗೆ ಪ್ರಶ್ನಿಸಬೇಕಾಗಿದೆ.
ಚುನಾವಣೆ ಮುಗಿದನಂತರ ಹಕ್ಕು ಪತ್ರ ಕೊಡುವವರೆಗು ಅನಿರ್ಧಿಷ್ಟಕಾಲ ಹೋರಾಟ ಮಾಡುತ್ತೇವೆ ಎಂದು ಮಾಜಿ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತೇಶ ನರಗುಂದ, ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಅಮೃತ ಬಿಜ್ಜಲ, ಖಾಜಾಹುಸೇನ್ ಸೋನಾರ, ರಾಜು ಬನ್ನಿಗೋಳ, ಹಸನ್ ಗೋತಗಿ, ಮುತ್ತಣ ಕಲ್ಗುಡಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದರು.

ವರದಿ : ವಿನೋದ ಬಾರಿಗಿಡದ ಇಳಕಲ್

error: