July 13, 2024

Bhavana Tv

Its Your Channel

ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾದ ಪ್ರವೀಣ ನೆಟ್ಟಾರುರಿಗೆ ಶ್ರದ್ಧಾಂಜಲಿ

ಆಥಣಿ:- ಮತಾಂಧರಿAದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಅವರಿಗೆ ಅಥಣಿ ನಗರದ ಶ್ರೀ ಶಿವಯೋಗಿ ವೃತ್ತದಲ್ಲಿ ಎಲ್ಲ ಹಿಂದೂ ಬಾಂಧವರು, ಪಕ್ಷದ ಕಾರ್ಯಕರ್ತರೊಂದಿಗೆ ಬಿಜೆಪಿ ಯುವ ಮೋರ್ಚಾ ಅಥಣಿ ಘಟಕದ ನೇತೃತ್ವದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುವದರ ಮೂಲಕ ಗೌರವ ಸಮರ್ಪಣೆಯನ್ನು ಮಾಡಲಾಯಿತು.

 ಇದೇ ವೇಳೆ ಯುವಮೋರ್ಚಾ ಕಾರ್ಯದರ್ಶಿ ಅಭಯ ಸಗರೆ ಮಾತನಾಡಿ, ಮತಾಂಧ ಹಂತಕರನ್ನು ಈ ಕೂಡಲೇ ಬಂಧಿಸಿ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡು, ಮುಂದೆ ಇಂತಹ ಘಟನೆಯನ್ನು ನಡೆಯದಂತೆ ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಯುವಮೊರ್ಚಾ ಜಿಲ್ಲಾದ್ಯಕ್ಷ ದೀಪಕ ಪಾಟೀಲ, ಉಪಾದ್ಯಕ್ಷ ಜಯದೇವ ಯಲ್ಲಟ್ಟಿ, ಅಜೀತ ಪವಾರ, ಪುರಸಭೆ ಸದಸ್ಯರಾದ ತಿಪ್ಪಣ್ಣ ಭಜಂತ್ರಿ, ವೆಂಕಟೇಶ ದೇಶಪಾಂಡೆ, ವಿನಯ ಪಾಟೀಲ, ನರಸು ಬಡಕಂಬಿ, ಮಂಜು ಭಜಂತ್ರಿ, ಸುಂದರ ಸೌದಾಗರ, ವಿಕ್ರಮ ಡೋಂಗರೆ, ಯುವಮೋರ್ಚಾ ತಾಲೂಕಾ ಕಾರ್ಯದರ್ಶಿ ಅಭಯ ಸಗರೆ, ಸುಶಾಂತ ಸಾಳುಂಕೆ, ಪುಟ್ಟು ಹಿರೇಮಠ, ಗಣೇಶ ಪೂಜಾರಿ, ಮಹಾಂತೇಶ ಮುಳ್ಳಟ್ಟಿ, ಪ್ರಶಾಂತ ತೋಡಕರ, ಅನೀಲ ಭೋಸಲೆ, ಸರ್ವೇಶ ಚವ್ಹಾಣ ಉಪಸ್ಥಿತರಿದ್ದರು.

ವರದಿ:- ಮಹೇಶ ಶರ್ಮಾ ಬೆಳಗಾವಿ

error: