July 12, 2024

Bhavana Tv

Its Your Channel

ಕೊಕಟನೂರ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮೊಟ್ಟೆ,ಶೇಂಗಾ ಚಿಕ್ಕಿ,ಬಾಳೆಹಣ್ಣು ಹಾಗೂ ಹಾಲು ವಿತರಣೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಗೊAಡ ಮಕ್ಕಳ ಪಾಲಿನ ಸರ್ಕಾರದ ಒಂದು ಮಹತ್ವದ ಯೋಜನೆಯಾದ “ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆಯನ್ನು ಸರಿಪಡಿಸುವ” ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ಹಾಗೂ ಹಾಲು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಶಾಲೆ ಪ್ರಧಾನ ಗುರುಗಳಾದ ಬಿ. ಎ.ಮುಜಾವರ, ಸರಕಾರದ ಯೋಜನೆ ಮಕ್ಕಳ ಬಾಳಲ್ಲಿ ಅವರಲ್ಲಿ ಇರತಕ್ಕಂತಹ ಪೋಷಕಾಂಶಗಳ ಕೊರತೆಯನ್ನು ಸರಿಯಾದ ರೀತಿಯಲ್ಲಿ ಹೋಗಲಾಡಿಸುವ ಮುಖ್ಯ ಗುರಿಯಾಗಿದೆ ಹಾಗೂ ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಬೇಕಾದ ಪ್ರತಿಯೊಂದು ಆಹಾರವನ್ನ ಒದಗಿಸುವ ಮುಖ್ಯ ಉದ್ದೇಶವು ಇರುವುದರಿಂದ ಉತ್ತಮ ಅನುಕೂಲವಾಗಲಿದೆ ಎಂದರು.
ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ಸೇವಿಸಿ ಕುಶಿ ಪಟ್ಟರು.

ವರದಿ:- ಮಹೇಶ ಶರ್ಮಾ ಬೆಳಗಾವಿ

error: