July 13, 2024

Bhavana Tv

Its Your Channel

ಬೆಳಗಾವಿ ಜಿಲ್ಲಾ ಬಿಸಿ ಊಟದ ಅಧಿಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾ ಬಿಸಿ ಊಟದ ಅಧಿಕಾರಿ ರಾಜೇಂದ್ರ ತೇರದಾಳ

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ ಪೌಷ್ಠಿಕತೆಯಿಂದ ಕೊಡಿದ್ದ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸುವ ಕಾರ್ಯಕ್ರವನ್ನು ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಕಟಗೇರಿ ಗ್ರಾಮದ ಶಾಲೆಗಳಲ್ಲಿ ಪರಸಿಲಿಸಿದಾಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದು ತಿಳಿಸಿದರು.

ಕೊಕಟನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿನೀಡಿ ಅಲ್ಲಿನ ಅಡುಕೆ ಸಿಬ್ಬಂದಿಯವರಿಗೆ ಮತ್ತು ಶಿಕ್ಷಕ ವರ್ಗದವರಿಗೆ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಿ ಅವರಲ್ಲಿ ಹೆಚ್ಚಿನ ಕಲಿಕಾ ಕೌಶಲ್ಯ ಅಭಿವೃದ್ಧಿ ಹೊದಬೇಕು ಎನ್ನುವ ಮೂಲಕ ತಿಳಿ ಮಾತನ್ನು ಹೇಳಿದರು.

ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ರಕ್ತಹೀನತೆ ಹಾಗೂ ಬಹು ಪೋಷಕಾಂಶಗಳ ನ್ಯೂನತೆ ಹೋಗಲಾಡಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ. ನಂತರ ಶಾಲೆಯ ಕೈಗಾರಿಕ ತೋಟ ಹಾಗೂ ಅಲ್ಲಿಯ ಆವರಣದಲ್ಲಿದ ಪರಿಸರದ ವಾತಾವರಣ ವ್ಯವಸ್ಥೆಯನ್ನು ನೋಡಿ ಅಧಿಕಾರಿ ಸಂತೋಷ ಪಟ್ಟರು.

ವರದಿ: ಮಹೇಶ ಶರ್ಮಾ ಬೆಳಗಾವಿ

error: