May 10, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದಎಸ್ಸಿಎಸ್ಟಿ ಹಿತ ರಕ್ಷಣಾ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ

ಗುಂಡ್ಲುಪೇಟೆ :- ಎಸ್.ಸಿ.ಎಸ್ .ಟಿ .ಹಿತಾ ರಕ್ಷಣಾ ಸಭೆಯಲ್ಲಿ ಮುಖಂಡರುಗಳು ಪುತ್ತನಪುರ ಗ್ರಾಮ ಪಂಚಾಯತಿ ಪುತ್ತನಪುರ ಗ್ರಾಮದ ರಸ್ತೆವಿಚಾರವಾಗಿ ತಾಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠ ರಾಜೇ ಅರ ಸ್ ರವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧಿಕಾರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಎರಡು ರಸ್ತೆಗಳು ಆಗಿವೆ ಲ್ಯಾಂಡ್ ಆರ್ಮಿಯವರಿಗೇ ನೀಡಿದ್ದೇವೆ. ಇನ್ನೆರಡು ರಸ್ತೆಗಳು ಆಗಿಲ್ಲ ಎಂದು ಸಭೆಯಲ್ಲಿ ತಿಳಿಸಿದ ರು. ಡಿಎಸ್‌ಎಸ್ ಮುಖಂಡರಾದ ನಂಜುAಡಸ್ವಾಮಿ ಮಾತನಾಡಿ ಪುತ್ತನಪುರ ಗ್ರಾಮದಲ್ಲಿ 4 ರಸ್ತೆಗಳು ಆಗಿವೆ ಎಂದು ಅನುಪಾಲನವರದಿಯಲ್ಲಿ ಮಾಡಿದ್ದೀರಿ. ಒಂದು ಕೋಟಿ ಅರವತ್ತು ಲಕ್ಷ ಹಣವನ್ನ ಗುಳುಂ ಮಾಡಿದ್ದೀರಿ. ಅಲ್ಲದೆ ಕೃಷಿ ಇಲಾಖೆ ಸಂಬAಧಪಟ್ಟAತೆ ಪವರ್ ಟ್ರಿಲ್ಲರ್ ಗಳು ಎಷ್ಟು ಬಂದಿದೆ ಯಾರಿಗೆ ನೀಡಿದ್ದೀರಿ ಅವು ಉಳ್ಳವರ ಪಾಲಾಗಿದೆ ಎಂದು ಆಕ್ರೋಶಭರಿತವಾಗಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಎಸ್ ಸಿ ಎಸ್ ಟಿ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತುಗಳನ್ನೂ ಅಧಿಕಾರಿಗಳು ತಮಗಿಷ್ಟ ಬಂದ ಹಾಗೆ ನೀಡುತ್ತಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಎಸ್ಸಿ ಎಸ್ಟಿ ಹಿತರಕ್ಷಣ ಸಮಿತಿಅಧ್ಯಕ್ಷರಾದ ಬಸವರಾಜು, ಪುರಸಭೆ ಅಧ್ಯಕ್ಷರಾದ ಪಿ .ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ ,ನಾಗೇಂದ್ರ , ನಂಜುAಡಸ್ವಾಮಿ ,ರಂಗಸ್ವಾಮಿ, ಮುತ್ತಣ್ಣ,ತಾಲೂಕು ದ0ಡಾಧಿಕಾರಿ ಸಿ .ಜಿ. ರವಿಶಂಕರ್, ಇ. ಒ. ಶ್ರೀಕಂಠ ರಾಜೇಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ರಾಜು, ಸಮಾಜ ಕಲ್ಯಾಣ ಇಲಾಖೆಯ ನಂಜುAಡ ಗೌಡ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

ವರದಿ ; ಸದಾನಂದ ಕನ್ನೆಗಾಲ ಗುಂಡ್ಲಪೇಟೆ

error: