April 28, 2024

Bhavana Tv

Its Your Channel

ಕ್ರೀಡೆಯಲ್ಲಿ ಸಾಧನೆ ಮಾಡಿದ ಶಾಲಾ ಮಕ್ಕಳಿಗೆ ಕರುನಾಡು ಯುವಶಕ್ತಿ ಸಂಘಟನೆ ವತಿಯಿಂದ ಸನ್ಮಾನ

ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರು ಗ್ರಾಮದ ಉನ್ನತ್ತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ (ರಿ) ಗುಂಡ್ಲುಪೇಟೆ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕದ ವತಿಯಿಂದ ಥ್ರೋಬಾಲ್ ಕ್ರೀಡೆಯಲ್ಲಿ ಕಳೆದೆರಡು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಪ್ರಸ್ತುತ ವಿಭಾಗ ಮಟ್ಟದಲ್ಲಿ ವಿಜೇತರಾದ 24 ಶಾಲಾ ಮಕ್ಕಳಿಗೆ 67 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಈಶ್ವರ್ ಎಸ್. ರವರು ಮಾತನಾಡುತ್ತಾ ನಮ್ಮ ಸಂಘಟನೆಯ ಕೇವಲ ಮನವಿ ಪತ್ರಕ್ಕೆ ಸೀಮಿತವಾಗದೆ ಕೊರೋನಾ ಸಂದರ್ಭದಲ್ಲಿ ಅನೇಕ ಬಡವರಿಗೆ ಕೂಲಿ
ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದೇವೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದ್ದೇವೆ ಅದೇ ರೀತಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು

ತದನಂತರ ಮಾತನಾಡಿದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯೋಗೇಶ ಕೆ ಕ್ರೀಡೆ ಎಂಬುದು ಸಂಘಟನಾತ್ಮಕ, ಸ್ಪರ್ಧಾತ್ಮಕ, ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ.ಕ್ರೀಡೆ ಎಂಬುದು ಕೇವಲ ಮಕ್ಕಳಿಗೆ ಸೀಮಿತವಾಗಿದೆ ದೊಡ್ಡವರಲ್ಲಿಯೂ ಕ್ರೀಡೆ ಮನೋಭಾವ ಬೆಳಸಿಕೊಂಡಾಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ.ಎಲ್ಲಿ ಸಧೃಡ ದೇಹವಿರುತ್ತದೋ ಅಲ್ಲಿ ಸಧೃಡ ಮನಸ್ಸು ಇರುತ್ತದೆ.ಹಾಗಾಗಿ ದೇಹ ಮನಸ್ಸು ಹಾಗೂ ಆರೋಗ್ಯಕ್ಕೂ ಅವಿನಾಭಾವ ಸಂಬAಧ ಇದೆ.ನಾವು ಆರೋಗ್ಯವಂತರಾಗಿ ಇರಬೇಕಾದರೆ ಉತ್ತಮ ದೇಹ ಇರಬೇಕು ಉತ್ತಮ ದೇಹ ನಿರ್ಮಾಣ ಆಗಬೇಕಾದರೆ ದೈಹಿಕ ಚಟುವಟಿಕೆ ಬಹಳ ಮುಖ್ಯ.ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನಮ್ಮಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇರಬೇಕು, ಇತ್ತೀಚಿನ ದಿನಗಳಲ್ಲಿ ಮನುಷ್ಯ ಒತ್ತಡದ ಜೀವನ ಸಾಗಿಸುತ್ತಾ ಯಾಂತ್ರಿಕ ಜೀವನಕ್ಕೆ ಹೊಂದಿಕೊAಡು ಯಂತ್ರಗಳಿAದ ಕೆಲ್ಸ ಮಾಡಿಸುತ್ತಾ ಸೋಮಾರಿಯಾಗಿ ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ.ಆದುದರಿಂದ ನಮ್ಮ ಸಂಘಟನೆಯು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕರುನಾಡ ಯುವ ಸಂಘಟನೆಯ ರಾಜ್ಯ ಮಾಧ್ಯಮ ಸಲಹೆಗಾರರಾದ ಮಹೇಂದ್ರ ಹಸಗೂಲಿ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಈಶ್ವರ್ ಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್ ಪಾಷಾ, ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅನ್ಸಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯೋಗೇಶ ಕೆ, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಮಲ್ಲೇಶ್ ಭೀಮನಬೀಡು,ಹಂಗಳ ಹೋಬಳಿ ಘಟಕದ ಅಧ್ಯಕ್ಷರಾದ ಆನಂದ, ಪಿಡಿಒ ರವಿ, ಶಾಲಾ ಮುಖ್ಯೋಪಾಧ್ಯಾಯರಾದ ಶಿವಸ್ವಾಮಿ ಎಂ.ಆರ್. ದೇಹಿಕ ಶಿಕ್ಷಣ ಶಿಕ್ಷಕರಾದ ಲತೀಶ್ಯ್ತ ಚಿನ್ನಪ್ಪ, ಸಹ ಶಿಕ್ಷಕರಾದ ಭಾಗ್ಯ, ರವೀಂದ್ರ, ರವಿ, ಕುಮಾರ,ಚಂದ್ರಕಲಾ, ಸವಿತಾ,s ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮಾದೇವಶೆಟ್ಟಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: