May 17, 2024

Bhavana Tv

Its Your Channel

2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾನು ಕೂಡ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ- ಎಂ ಪಿ ಸುನಿಲ್

ಗುಂಡ್ಲುಪೇಟೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ಚಾಮುಲ್ ನಿರ್ದೇಶಕರಾದ ಎಂಪಿ ಸುನಿಲ್ ರವರು ಸುದ್ದಿಗೋಷ್ಠಿ ನಡೆಸಿ ನಾನು ಕೂಡ ಈ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಸೇವಾಕಾಂಕ್ಷಿಯಾಗಿದ್ದೇನೆ. ಏಕೆಂದರೆ ನಾನು ಈ ಎರಡು ಬಾರಿ ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆ ಮಾಡಿದ್ದೇನೆ .ಮತ್ತು ಅಲ್ಲದೆ ಚಾಮುಲ್ ಚುನಾವಣೆಯಲ್ಲಿ ಮತದಾರ ಪ್ರಭುಗಳು ನಮ್ಮನ್ನು ಭ್ರಷ್ಟಾಚಾರ ಮುಕ್ತ ಮಾಡಲು ಆಯ್ಕೆ ಮಾಡಿ ಕಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ ಒಮ್ಮತದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಬೇಕು ಎಂದು ತಮ್ಮ ಅಭಿಪ್ರಾಯದ ಮೂಲಕ ತಿಳಿಸಿರುತ್ತಾರೆ. ಆದಕಾರಣ ಉತ್ತರ ಪ್ರದೇಶದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮತ್ತು ಪಕ್ಷದ ಸಿದ್ಧಾಂತದ ಮೇರೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಎಂದು ಮಾಧ್ಯಮದ ಮೂಲಕ ಎಂ ಪಿ ಸುನಿಲ್ ರವರು ತಿಳಿಸಿದ್ದಾರೆ.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಕೆ ಸಿ ಮಧು ಮಾತನಾಡಿ ಒಂದೇ ಪಕ್ಷದಲ್ಲಿ ಟಿಕೆಟ್ ಕೇಳುವುದು ಭಿನ್ನಾಭಿಪ್ರಾಯವಲ್ಲ, ತಾಲೂಕಿನ ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುವ ದೃಷ್ಟಿಯಿಂದ ಆಯ್ಕೆ ಮಾಡಿದ್ದಾರೆ.ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಎಂಪಿ ಸುನಿಲ್ ರವರು ಬರುವುದಕ್ಕಿಂತ ಮುಂಚೆ ತಾಲೂಕಿನಲ್ಲಿ 36 ಬ್ಯಾಂಕ್ ಗಳನ್ನು ಮುಚ್ಚಲು ರೆಡಿಯಾಗಿದ್ದರು. ಸುನಿಲ್ ರವರು ಬಂದಮೇಲೆ ಆ ಮೂವತ್ತಾರು ಬ್ಯಾಂಕ್ ಗಳು ಜೀವಂತವಾಗಿ ಉಳಿಕೊಂಡಿವೆ. ಎಂದರೆ ಇದಕ್ಕೆ ಕಾರಣ ಎಂ ಪಿ ಸುನಿಲ್ ರವರು ಮಾಡಿರುವ ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ ಕೆಲಸ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಕೆ ಸಿ ಮಧುರವರು ಮಾಧ್ಯಮದ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಎಂಪಿ ಸುನಿಲ್ ಬಳಗದ ಕರುಣಮೂರ್ತಿ, ಹೂರದಹಳ್ಳಿ ಪ್ರಸಾದ್, ಶಿ0ಡ ನಪುರ ಶಿವಕುಮಾರ್, ಚೆನ್ನಮಲಿಪುರ ಸುರೇಶ್, ಕೂ ತನೂರು ಗೋಪಾಲ್ , ನಾಗರಾಜ್, ಗುಂಡ್ಲುಪೇಟೆ ಸತೀಶ್,ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: